ಬೆಳ್ಳೇಕೆರೆ ಹಳ್ಳಿ

Author : ಪ್ರಸಾದ ರಕ್ಷಿದಿ

Pages 205

₹ 100.00




Published by: ಅಭಿನವ ಪ್ರಕಾಶನ
Address: 17/18-2, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

‘ಬೆಳ್ಳೇಕೆರೆ ಹಳ್ಳಿ’ ಕೃತಿಯು ಪ್ರಸಾದ್ ರಕ್ಷಿದಿ ಅವರ ನಾಟಕ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಬೆಂಗಳೂರಿನ ಹೊರಗೂ ರಂಗಭೂಮಿ ಇದೆ ಎಂದು ಹೇಳಲು ಆಧಾರಕ್ಕೆ ನೀನಾಸಂ, ರಂಗಾಯಣಗಳನ್ನಷ್ಟೇ ಹೆಸರಿಸುತ್ತೇವೆ. ಆದರೆ ತಿಪಟೂರು, ಸಾಣೆಹಳ್ಳಿ, ಶಿವಮೊಗ್ಗ, ಉಡುಪಿಗಳಲ್ಲಿ ರಂಗಭೂಮಿಯನ್ನು ಹಚ್ಚಿಕೊಂಡು ಹಲವರು ಬೆಳೆಸುತ್ತಿದ್ದಾರೆ. ಗ್ರಾಮೀಣ ರಂಗಭೂಮಿ ಇನ್ನೂ ಹೆಚ್ಚು ಹುಲುಸಾಗಿದೆ. ಈ ನಿಟ್ಟಿನಲ್ಲಿ `ಬೆಳ್ಳೇಕೆರೆ ಹಳ್ಳಿ ಥೇಟರ್‘ ಎಂಬ ಕೃತಿ ಇಲ್ಲಿ ಉಲ್ಲೇಖಾರ್ಹ. ಲೇಖಕ ಪ್ರಸಾದ್ ರಕ್ಷಿದಿ ಇದನ್ನು `ಒಂದು ಗ್ರಾಮೀಣ ರಂಗಭೂಮಿಯ ಆತ್ಮಕಥನ‘ ಎಂದು ಕರೆದಿದ್ದಾರೆ. ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ ಬೆಳ್ಳೇಕೆರೆಯ ರಂಗಭೂಮಿ ಬೆಳೆದುಬಂದ ಕತೆಯನ್ನು ಇಲ್ಲಿ ಲೇಖಕರು ವಿವರಿಸಿದ್ದಾರಾದರೂ ಅದರ ಜೊತೆಗೇ ಊರು, ಊರ ಮಂದಿ, ಊರ ಸಂಸ್ಕೃತಿ ಮೂರ್ತಗೊಂಡಿದ್ದನ್ನು ದಾಖಲಿಸಿದ್ದಾರೆ. ಆ ಮಟ್ಟಿಗೆ ಇದೊಂದು ಸಂಸ್ಕೃತಿ ಕಥನವೂ, ಗ್ರಾಮೀಣ ಸಾಂಸ್ಕೃತಿಕ ಇತಿಹಾಸದ ದಾಖಲೆಯೂ ಆಗಿ ಕಾಣುತ್ತದೆ ಎಂದು ವಿಶ್ಲೇಷಿತವಾಗಿದೆ.

About the Author

ಪ್ರಸಾದ ರಕ್ಷಿದಿ

ಹಾಸನ ಜಿಲ್ಲೆಯ ಸಕಲೇಶಪುರದವರಾದ ಪ್ರಸಾದ ರಕ್ಷಿದಿ ಅವರು ಖ್ಯಾತ ರಂಗಕರ್ಮಿ. ಬಿಎಸ್ಸಿ ಪದವೀಧರ ಆಗಿರುವ ಅವರು ನಾಟಕ ರಚನೆ, ನಟನೆ, ರಂಗ ಸಂಘಟನೆ, ನಿರ್ದೇಶನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಮ್ಮ ಎಲುಬುಗಳ ಮೇಲೆ, ಅನಾಮಿಕರು, ಸತ್ಯಕ್ಕೆ ಸಾವಿಲ್ಲ, ಮಾಯಾಮೃಗ, ಪ್ಲಾಂಟರ್ ಪರಮೇಶಿ, ಧನ್ವಂತರಿಯ ಚಿಕಿತ್ಸೆ ಅವರು ನಿರ್ದೇಶಿಸಿದ ನಾಟಕಗಳು. ನಮ್ಮ ನಡುವಿನ ತೇಜಸ್ವಿ ಆಪ್ತವಾದ ವ್ಯಕ್ತಿಚಿತ್ರ. ಬೆಳ್ಳೆಕೆರೆ ಹಳ್ಳೀ ಥೇಟರ್ ಒಂದು ಗ್ರಾಮೀಣ ರಂಗಭೂಮಿಯ ಆತ್ಮೀಯ ಆತ್ಮಕಥನ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಂದ  ಸಾಂಸ್ಕೃತಿಕ ಹಾಗೂ ರಂಗ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿರುವ ಅವರು ಜೈ ಕರ್ನಾಟಕ ...

READ MORE

Related Books