ರಾಧಿಕಾ ಕಾಖಂಡಿಕಿ ಅವರು ಬಿ ಎಸ್ಸಿ, ಎಮ್ ಎ (ಸಂಸ್ಕೃತ) ಪದವಿ ಪಡೆದಿರುವ ಅವರು ಶಾಸ್ತ್ರೀಯ ಮತ್ತು ಲಘು ಸಂಗೀತ ಕಲಾವಿದರು. ಸಂಗೀತದಲ್ಲಿ 'ಅಲಂಕಾರ' ಹಾಗೂ 'ಸೀನಿಯರ್' ಪದವೀಧರೆ, ಭಾರತೀಯ ಸ್ಟೇಟ್‌ಬ್ಯಾಂಕ್ ಸ್ವಯಂ ನಿವೃತ್ತ ಉದ್ಯೋಗಿಯಾಗಿದ್ದರು. ಶಾಸ್ತ್ರೀಯ, ಲಘು ಶಾಸ್ತ್ರೀಯ ಸಂಗೀತದಲ್ಲಿ ವಿಶೇಷ ಪರಿಣತಿ ಪಡೆದಿರುವ ಅವರು ವಚನ, ದಾಸರ ಪದಗಳು, ಅನೇಕ ಹಿರಿಯ ಕವಿಗಳ ಭಾವಗೀತೆಗಳಿಗೆ ಸ್ವತಃ ಸ್ವರ ಸಂಯೋಜನೆಯನ್ನು ಮಾಡಿ ಪ್ರಸ್ತುತ ಪಡಿಸುತ್ತಾರೆ. ಬೇಂದ್ರೆಯವರ ಭಾವಗೀತೆಗಳ ವಿಶೇಷ ಅಧ್ಯಯನ. "ನಾದಲೋಲ ಬೇಂದ್ರೆ" ಮತ್ತು "ರಾಗ ಭೂಪ ಬೇಂದ್ರೆ" ಪ್ರಬಂಧಗಳ ಮಂಡನೆ. ಬೇಂದ್ರೆಯವರ "ಕೊಳಲನೂದಿದನೇನ ಕೃಷ್ಣ" ಕೃಷ್ಣನ ಕುರಿತಾದ ಹಾಡುಗಳಿಗೆ ಸ್ವರ ಸಂಯೋಜನೆಯನ್ನು ಮಾಡಿ ಕಾರ್ಯಕ್ರಮ ನೀಡಿದ್ದಾರೆ ಮತ್ತು ಹತ್ತು ಹಾಡುಗಳ ಧ್ವನಿಸುರುಳಿ "ನಾದಬೇಕು" ಹೊರ ತಂದಿದ್ದಾರೆ. ಕತೆ, ಕವಿತೆ, ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. 2011 ರಲ್ಲಿ ಕುಂದಗೋಳದಲ್ಲಿ ಸವಾಯಿ ಗಂಧರ್ವರ ಪುಣ್ಯತಿಥಿಯಂದು ಶಾಸ್ತ್ರೀಯ ಸಂಗೀತ ಸಾಧನೆಗಾಗಿ ಸನ್ಮಾನ. ಅಂಬಿಕಾತನಯದತ್ತ ವೇದಿಕೆ ಸಿಂದಗಿಯಿಂದ 2017 - 18 ರ ರಜತ ಮಹೋತ್ಸವದಲ್ಲಿ ಬೇಂದ್ರೆ ಕಾವ್ಯ ಗಾಯನ, ಸಾಹಿತ್ಯ ಕುರಿತು ಗಣನೀಯ ಸೇವೆಗಾಗಿ "ಬೇಂದ್ರೆ ಪುರಸ್ಕಾರ" ಪ್ರಶಸ್ತಿ.