12ನೇ ಶತಮಾನದ ಶರಣ ಅಲ್ಲಮಪ್ರಭುವನ್ನು ಕುರಿತ ‘The sport of Allama' ನಾಟಕವನ್ನು ಲೇಖಕ ಪ್ರೊ. ಬಸವರಾಜ ನಾಯ್ಕರ ಅವರು ರಚಿಸಿದ ಕೃತಿ. ಇದು ಐತಿಹಾಸಿಕ ಧಾರ್ಮಿಕವಾದ ವಿಷಯವಸ್ತುವನ್ನು ಒಳಗೊಂಡಿದೆ. ಶಿವನ ಸಾತ್ವಿಕತೆಯನ್ನು ಪ್ರತಿನಿಧಿಸುವ ಅಲ್ಲಮಪ್ರಭುವಿನ ವ್ಯಕ್ತಿತ್ವ ಹಾಗೂ ಮಾಯೆಯನ್ನು ಸೋಲಿಸಿದ ಬಗೆ, ಪಾರ್ವತಿಯ ಸಾತ್ವಿಕತೆಯ ಪ್ರತಿನಿಧಿಯಂತಿರುವ ಶರಣೆ ಅಕ್ಕಮಹಾದೇವಿಯಿಂದ ಕಲಿತ ಅಧ್ಯಾತ್ಮಿಕ ಹೊಳವುಗಳು ನಾಟಕದ ವಸ್ತುಗಳಾಗಿವೆ. ಭೌತಿಕ ಸಂಪತ್ತಿನ ಕ್ಷಣಿಕತೆಯ ಕುರಿತು ಸಹ ಈ ನಾಟಕದ ಸಂದೇಶವಾಗಿದೆ.
ಡಾ. ಬಸವರಾಜ ನಾಯ್ಕರ್ ಅವರು ಮೂಲತಃ ಗದಗ (ಜನನ: 01-08-1949) ಜಿಲ್ಲೆಯ ನರಗುಂದದವರು. ತಂದೆ ಶಿವಶಂಕರಪ್ಪ ನಾಯ್ಕರ, ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ, ನರಗುಂದದಲ್ಲಿ ಪ್ರೌಢಶಿಕ್ಷಣ ಮತ್ತೇ ಧಾರವಾಡದಲ್ಲಿ ಪಿಯುಸಿಯಿಂದ ಕರ್ನಾಟಕ ವಿ.ವಿಯಲ್ಲಿ ಸ್ನಾತಕೋತ್ತರ ಪದವಿ (ಎಂ.ಎ-ಇಂಗ್ಲಿಷ್) ಹಾಗೂ ಕ್ಯಾಲಿಫೋರ್ನಿಯಾದಿಂದ ಡಿ.ಲಿಟ್ ಪದವೀಧರರು. ಗುಲಬರ್ಗಾ ವಿ.ವಿಯಲ್ಲಿ ಸಂಶೋಧನಾ ಸಹಾಯಕರಾಗಿ ವೃತ್ತಿ ಜೀವನ ಆರಂಭಿಸಿ ಅಲ್ಲಿಯೇ ಉಪನ್ಯಾಸಕರಾಗಿ ರೀಡರ್ ಆಗಿ ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರೀಡರ್, ಪ್ರೊಫೆಸರ್, ಪ್ರೊಫೆಸರ್ ಎಮಿರಿಟಿಸ್ ಆಗಿ (2011-12) ನಿವೃತ್ತಿಯಾದರು. ಅನುವಾದಿತ ಕೃತಿಗಳು: ಪಡುವಣ ನಾಡಿನ ಪ್ರೇಮವೀರ- 1975, ಜೋಗೀಭಾವಿ-1976, ಕೊಳ್ಳದ ನೆರಳು-1978, ಹುಚ್ಚುಹೊಳೆ-1980, ನಿಗೂಢ ಸೌಧ (11 ಫ್ರೆಂಚ್ ಕಥೆಗಳ ಅನುವಾದ)-1982, ಗೋವರ್ಧನರಾಮ-1984, ಭಾರತೀಯ ಇಂಗ್ಲೀಷ್ ಸಾಹಿತ್ಯ ಚರಿತ್ರೆ-2006, ಕೆಂಪು ...
READ MORE