‘ಮೂಕ ಬಲಿ’ ಜಡಭರತ ಕಾವ್ಯ ನಾಮದಿಂದ ಕೃತಿಯಗಳನ್ನು ರಚಿಸುವ ಜಿ.ಬಿ. ಜೋಶಿ ಅವರ ನಾಟಕ. ನಾಟಕದ ಉದ್ದಕ್ಕೂ ಬಾಣಂತಿ ಕೋಣೆ ಬಿಟ್ಟು ಸರಿದಾಡುವುದಿಲ್ಲ ಹೊರಕ್ಕೆ ಬರುವುದಿಲ್ಲ. ಪ್ರೇಕ್ಷಕರ ಕಣ್ಣಿಗೆ ಕಾಣುವಂತಿಲ್ಲ. ಹೀಗಿದ್ದರೂ ನಾಟಕದಲ್ಲಿಯ ಯಾವ ಪಾತ್ರಕ್ಕೂ ಕಡಿಮೆಯಲ್ಲದಷ್ಟು ಮಾತಾಡುತ್ತಾಳೆ. ಒಂದು ಪಾತ್ರ ರಂಗದ ಮೇಲಿದ್ದು, ಇನ್ನೊಂದು ಪಾತ್ರ ಮರೆಯಲ್ಲಿದ್ದು, ಅವರ ನಡುವಿನ ಸಂಭಾಷಣೆ ಬಹಳ ಹೊತ್ತಿನವರೆಗೆ ನಡೆದರೆ ಪ್ರೇಕ್ಷಕರ ಇಲ್ಲದ ಕುತೂಹಲ ಕೆರಳಿ ಅದಕ್ಕೆ ಸಮಾಧಾನ ಸಿಗದೆ ಅತೃಪ್ತಗೊಂಡು, ಬೇಸರದಲ್ಲಿ ಪರ್ಯಾವಸಾನಗೊಳ್ಳಬಹುದು. ಪ್ರೇಕ್ಷಕರಿಗೆ ಕಾಣುವಂತೆ ಮಾಡಿದರೆ ಸಂಕೇತದ ಸುಖ ಸ್ಪರ್ಶ ಕಡಿಮೆಯಾಗಬಲ್ಲುದು. ಆ ಸಂಕೇತ ಹಾಳಾಗದಂತೆ, ಬೇಸರ ಹುಟ್ಟಿಸಿದಂತೆ ಜೋಶಿ ಅವರು ಈ ನಾಟಕವನ್ನು ಕಟ್ಟಿದ್ದಾರೆ.
ಪದ್ಮಶ್ರೀ ಗೋವಿಂದ ಭೀಮಾಚಾರ್ಯ ಜೋಶಿ ಇವರು 1904 ಜುಲೈ 26 ರಂದು ಗದಗ ಜಿಲ್ಲೆಯ ಹೊಂಬಳದಲ್ಲಿ ಜನಿಸಿದರು. ಜಿ.ಬಿ.ಜೋಶಿಯವರು 1933 ರಲ್ಲಿ ಮನೋಹರ ಗ್ರಂಥಮಾಲೆಯನ್ನು ಬೆಟಗೇರಿ ಕೃಷ್ಣಶರ್ಮ ಹಾಗೂ ಚುಳಕಿ ಗೋವಿಂದರಾವ ಇವರ ಜೊತೆಗೂಡಿ ಪ್ರಾರಂಭಿಸಿದರು. ಈ ಪ್ರಕಾಶನ ಸಂಸ್ಥೆಯ ಮೂಲಕ ಅನೇಕ ಖ್ಯಾತ ಲೇಖಕರನ್ನುಕನ್ನಡ ಸಾಹಿತ್ಯಕ್ಕೆ ಪ್ರಥಮವಾಗಿ ಪರಿಚಯಿಸಿದರು. 1959 ರಲ್ಲಿ ಹೊರಬಂದ ರಜತ ವರ್ಷದ ಕಾಣಿಕೆಯಾದ “ನಡೆದು ಬಂದ ದಾರಿ” ಮೂರು ಸಂಪುಟಗಳಲ್ಲಿ ಪ್ರಕಟವಾಯಿತು. ಈ ಹೊತ್ತಿಗೆಯಲ್ಲಿ ಪ್ರಕಟವಾದ ಕೀರ್ತಿನಾಥ ಕುರ್ತಕೋಟಿಯವರ ಕನ್ನಡ ಸಾಹಿತ್ಯದ ಸಮಗ್ರ ವಿಮರ್ಶೆ, ವಿಮರ್ಶಾಲೋಕದಲ್ಲಿ ಹೊಸ ಆಯಾಮವನ್ನು ತೆರೆಯಿತು. ಆ ಬಳಿಕ ವಿಮರ್ಶೆಯ ನಿಯತಕಾಲಿಕೆ “ಮನ್ವಂತರ”ವನ್ನು ಪ್ರಾರಂಭಿಸಿದರು. ಜಿ.ಬಿ.ಜೋಶಿಯವರು ...
READ MORE