ಸಮಕಾಲೀನ ಸನ್ನಿವೇಶಗಳಿಗೆ ಸ್ಪಂದಿಸುವ, ಇತಿಹಾಸದ ತಿರುಳನ್ನು ಬಗೆದು ಕಟ್ಟಿಕೊಡುವ ನಾಟಕ ಕೃತಿ ಲೇಖಕ ಜಯರಾಮ್ ರಾಯಪುರ ಅವರ ‘ಚಾವುಂಡರಾಯ’. ಇದು ಕನ್ನಡ ನಾಡಿನ ವಾಸ್ತುಶಿಲ್ಪಕಲೆ ಸಾಹಿತ್ಯ ಸಂಸ್ಕೃತಿಯ ಸಂವರ್ಧನೆಗೆ ನಿಡುಗಾಲ ಶ್ರಮಿಸಿದ ಗಂಗರ ಕಡೆಗಾಲದ ಹೃದ್ಯ ಚಿತ್ರಣವಿರುವ ಐತಿಹಾಸಿಕ ನಾಟಕ. ಇಲ್ಲಿ ಚರಿತ್ರೆ ಮತ್ತು ಸಂಸ್ಕೃತಿಯ ಬೆಸುಗೆಯು ಕರ್ಣನ ಕವಚ ಕುಂಡಲಗಳಂತೆ ಅವಿಭಾಜ್ಯವಾಗಿವೆ. ಪರಿಮಿತ ಪಾತ್ರಗಳ ಮೂಲಕ ಅಪರಿಮಿತ ಇತಿಹಾಸದ ಕೆನೆಪದರನ್ನು ಕಟ್ಟಿಕೊಡುವ ಪ್ರಯತ್ನದಲ್ಲಿರು ಲೇಖಕನ ಸೃಜನ ಸಾಮರ್ಥ್ಯ ವಿಜೃಂಭಿಸಿದೆ. ಭಾವನಾತ್ಮಕ ಬೆಸುಗೆಯಿಂದ ಬಿಡಿಸಿಕೊಂಡಿರುವ 'ಚಾವುಂಡರಾಯ' ಕೃತಿಯು ತಟಸ್ಥ ಭೂಮಿಕೆಯಲ್ಲಿ ನಿಂತು, ವಸ್ತುನಿಷ್ಠವಾಗಿ ಪರಿಭಾವಿಸಿ, ಇತಿಹಾಸದ ಚೌಕಟ್ಟಿಗೆ ಎರವಾಗದಂತೆ ರಚಿತವಾಗಿರುವ ಪ್ರಮುಖ ನಾಟಕವಾಗಿದೆ.
©2024 Book Brahma Private Limited.