ದಿಂಡಿ

Author : ಚಂದ್ರಕಾಂತ ಕುಸನೂರ

Pages 96

₹ 20.00




Year of Publication: 1992
Published by: ಮನೋಹರ ಗ್ರಂಥ ಮಾಲಾ
Address: ಧಾರವಾಡ- 580001

Synopsys

‘ದಿಂಡಿ’ ಲೇಖಕ ಚಂದ್ರಕಾಂತ ಕುಸನೂರ ಅವರ ನಾಟಕ. ಮಹಾರಾಷ್ಟ್ರದ ಭಕ್ತಿ ಸಂಪ್ರದಾಯದಲ್ಲಿ ವಾರಕರಿ ಪಂಥಕ್ಕೆ ಬಹಳ ಮಹತ್ವವಿದೆ. ಈ ಪಂಥದಲ್ಲಿ ಜಾತಿ ಮತಕ್ಕೆ ಸ್ಥಾನವಿಲ್ಲ. ಇಲ್ಲಿ ದೊಡ್ಡವರು ಸಣ್ಣವರೆಂಬ ಅಂತಸ್ತುಗಳಿಲ್ಲ. ಇವರೆಲ್ಲರೂ ಪಂಢರಿಪುರದ ಪಾಂಡುರಂಗನ ಭಕ್ತರು. ಸಾತ್ವಿಕ ಜೀವನವನ್ನು ಸಾಗಿಸಿಕೊಂಡು ಹೋಗುವವರು, ನಿತ್ಯ ಧ್ಯಾನ, ಮನನ, ಚಿಂತನ, ಕೀರ್ತನ, ಭಜನೆಯಲ್ಲಿ ಸಮಯ ಕಳೆಯವವರು. ಆಷಾಢ ಮತ್ತು ಕಾರ್ತಿಕ ಏಕಾದಶಿಗೆ ಆ ಜನರು ಪಂಢರಪುರದ ಯಾತ್ರೆಗೆ ಹೊರಡುತ್ತಾರೆ. ಈ ಯಾತ್ರೆಯನ್ನು ದಿಂಡಿ ಎನ್ನುತ್ತಾರೆ.

ಊರು ಕೇರಿಗಳಿಂದ ತಂಡಗಳನ್ನು ಕಟ್ಟಿಕೊಂಡು ಕೈಯಲ್ಲಿ ತಾಳ, ಕೊರಳಿಗೆ ಮೃದಂಗ ಸಿಕ್ಕಿಸಿಕೊಂಡು ಹೊರಡುತ್ತಾರೆ. ಹಣೆಯ ಮೇಲೆ ಗಂಧಾಕ್ಷತೆ, ಕೊರಳಲ್ಲಿ ತುಳಸಿಮಾಲೆ, ಭುಜದ ಮೇಲೆ ಚಿಕ್ಕದೊಂದು ಕಾವಿ ಧ್ವಜ ಬಹುತೇಕ ಎಲ್ಲರ ಮೈ ಮೇಲೆ ಕಾವಿ ಜುಬ್ಬ - ಪಂಚೆ, ತಂಡಕ್ಕೊಂದು ಪಲ್ಲಕ್ಕಿ, ಅದರಲ್ಲಿ ಅವರ ಆರಾಧ್ಯಮೂರ್ತಿ ಅಥವಾ ಫೋಟೋ . ಎಲ್ಲ ವಯಸ್ಸಿನ ಭಕ್ತರು ಹಾಡುತ್ತಾ ಕುಣಿಯುತ್ತಾ ಸಾಗುವ ಈ ಯಾತ್ರೆಯೇ ಈ ಕೃತಿ ರಚನೆಗೆ ಪ್ರೇರಕ. ಅಲ್ಲಿಯ ಮಾತು ಕತೆ, ಜನರ ವರ್ತನೆ ಎಲ್ಲವನ್ನು ಹಾಸ್ಯ ರೂಪಕದಲ್ಲಿ ಒಂದು ನಗೆ ನಾಟಕವನ್ನು ನೀಡಿದ್ದಾರೆ.

About the Author

ಚಂದ್ರಕಾಂತ ಕುಸನೂರ
(21 October 1931 - 18 April 2020)

ಕನ್ನಡದ ಖ್ಯಾತ ಸಾಹಿತಿ, ರಂಗಕರ್ಮಿ ಚಂದ್ರಕಾಂತ ಕುಸನೂರು ಮೂಲತಃ ಕಲಬುರಗಿಯ ಕುಸನೂರಿನವರು. (ಜನನ: 1931ರ ಅಕ್ಟೋಬರ್ 21) ಎಂ.ಎ,  ಬಿ.ಇಡಿ ಪದವೀಧರರು. ಕಲಬುರ್ಗಿ ಹಿಂದಿ ಶಿಕ್ಷಣ ತರಬೇತಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಲಬುರ್ಗಿಯಲ್ಲಿ ರಂಗ ಮಾಧ್ಯಮ ಎಂಬ ನಾಟಕ ಸಂಸ್ಥೆಯನ್ನು ಸ್ಥಾಪಿಸಿ, ಕನ್ನಡದಲ್ಲಿ ವಿಭಿನ್ನ ಮಾದರಿಯ ನಾಟಕಗಳನ್ನು ರಚಿಸಿದ್ದಾರೆ. ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿದ್ದು, ಆನಿ ಬಂತಾನಿ, ರಿಹರ್ಸಲ್, ರತ್ತೋ ರತ್ತೋ ರಾಯನ ಮಗಳೇ, ದಿಂಡಿ, ವಿದೂಷಕ, ಹಳ್ಳಾ ಕೊಳ್ಳಾ ನೀರು ನಾಟಕಗಳನ್ನು ರಚಿಸಿದ್ದಾರೆ, ಜೊತೆಗೆ, ನಂದಿಕೋಲು ಎನ್ನುವ ಕಾವ್ಯ ಸಂಕಲನ, ಮಾಲತಿ ಮತ್ತು ನಾನು, ಯಾತನಾ ಶಿಬಿರ, ಗೋಹರಜಾನ್, ...

READ MORE

Related Books