ಉಚ್ಛ ಶಿಕ್ಷಣ ಪಡೆದು, ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಛಲದೊಂದಿಗೆ ದೊಡ್ಡ ತತ್ವವನ್ನು ಯಲೆಯಲ್ಲಿ ತುಂಬಿಕೊಂಡ ಇಬ್ಬರು ತರುಣರು, ತಮ್ಮ ಈ ಯೋಜನೆಗಳನ್ನು ಹೇಗೆ ಕಾರ್ಯರೂಪಕ್ಕೆ ತರಬೇಕೆಂದು ತಿಳಿಯದೇ ತೊಳಲಾಡುವ ಇಬ್ಬರು ತರುಣರ ಕಥೆಯೇ ದರಿದ್ರ ನಾರಾಯಣ-ಸಾಮಾಜಿಕ ನಾಟಕದ ಕಥಾ ವಸ್ತು. ಆದರೆ, ಆಡದೇ ಮಾಡಿ ತೋರಿಸುವವನೂ ಒಬ್ಬ ಪಾತ್ರಧಾರಿ ಇದ್ದು, ಪರಿಸ್ಥಿತಿಯಿಂದ ಕಂಗೆಡುವ ಪಾತ್ರಗಳು, ತಮ್ಮದೇ ನಡೆಯಬೇಕು ಎಂದು ಹಠ ಸಾಧಿಸುವ ಹಿರಿಯರು-ಪೋಷಕ ಪಾತ್ರಗಳಲ್ಲಿದ್ದು, ವ್ಯವಹಾರೋದ್ಯಮಗಳು ಕ್ರಮೇಣ ಸ್ಥಗಿತಗೊಳ್ಳುತ್ತಿದ್ದು. ಮುಂದೇನು ಎಂಬ ಚಿಂತೆಯು ಸಾರ್ವಜನಿಕರ ಚಿಂತನೆಯನ್ನು ಪ್ರೇರೇಪಿಸುತ್ತದೆ. ನಮ್ಮ ದೇಶದಲ್ಲಿ ವ್ಯವಹಾರೋದ್ಯಮ ಬೆಳೆಸಲು ವಿಫುಲ ಕಚ್ಚಾವಸ್ತುಗಳು ಇದ್ದರೂ ಆ ಕಡೆ ಗಮನ ಹರಿಸುತ್ತಿಲ್ಲ. ಇದನ್ನು ಸಹ ನಾಟಕದ ಮೂಲಕ ಹೇಳಲಾಗಿದೆ. ಈ ಬಗ್ಗೆ ತಿಳಿಯುವುದು ಅಗತ್ಯ ಎಂದು ನಾಟಕಕ್ಕೆ ಮುನ್ನುಡಿ ಬರೆದ ಧೀರೇಂದ್ರ ಕೃಷ್ಣ ಗುಂಜೀಕರ್ ಅವರು ಅಭಿಪ್ರಾಯಪಟ್ಟಿದ್ದಾರೆ.
©2024 Book Brahma Private Limited.