‘ವಿಚಾರಿತ’ ಲೇಖಕ ಜಿ. ಎಸ್. ಆಮೂರ ಅವರ ಕೃತಿ. ತಲಸ್ಪರ್ಶಿ ಅಧ್ಯಯನ ಹಾಗೂ ಸಮಗ್ರ ನೋಟ ಆಮೂರರ ಬರವಣಿಗೆಯ ರಚನಾವಿನ್ಯಾಸವನ್ನು ರೂಪಿಸಿದೆ. ಆಧುನಿಕ ಕನ್ನಡ ಸಾಹಿತ್ಯ ಪ್ರಕಾರಗಳ ಸ್ವರೂಪ ಚರಿತ್ರೆಯನ್ನು ತಮ್ಮ ಅಪಾರ ಪರಿಶ್ರಮ ಹಾಗೂ ಸೂಕ್ಷ್ಮ ಒಳನೋಟಗಳ ಮೂಲಕ ಆಮೂರರು ಕಟ್ಟಿಕೊಟ್ಟಿರುವ ಕ್ರಮ ಅನನ್ಯವಾದುದು. ಕನ್ನಡ ಸಂಸ್ಕೃತಿ ನಿರ್ಮಾಣದಲ್ಲಿ ಆಮೂರರು ತಮ್ಮನ್ನು ತೊಡಗಿಸಿಕೊಂಡಿರುವ ರೀತಿ ಯಾವುದೇ ಭಾಷೆಯ ಸಾಹಿತ್ಯ ಸಂಸ್ಕೃತಿಗೂ ಮಾದರಿಯಾಗಿರುವಂಥದು.
ಆಮೂರರು ಸತತಾಭ್ಯಾಸಿ. ಅವರು ಅನೇಕ ವರ್ಷಗಳ ಕಾಲ ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿ ಪ್ರಿಯ ಅಧ್ಯಾಪಕರಾಗಿದ್ದವರು. ವಿಶ್ವಸಾಹಿತ್ಯದ ಅನೇಕ ಮಹತ್ವದ ಕೃತಿ, ಲೇಖಕರು ಅವರ ಸಾಹಿತ್ಯ ಸಂಚಾರದ ತಂಗುದಾಣಗಳು. ಅಂತಹ ತಂಗುದಾಣಗಳಲ್ಲಿ ಅವರು ನಿಂತು ಕಂಡುಕೊಂಡ ದರ್ಶನ“ವಿಚಾರಿತ'ದಲ್ಲಿದೆ.
ವಾಲ್ಮೀಕಿ, ಹೋಮರ್, ಕಾಳಿದಾಸ, ಶ್ರೀರಂಗ ನೈಪಾಲ್ ಆರ್.ಕೆ. ನಾರಾಯಣ್, ರಾಜಾರಾವ್, ಅಮಿತಾವ್ ಘೋಷ್, ಭೈರಪ್ಪ, ಜಡಭರತ ಜಪಾನೀ ಸಾಹಿತ್ಯ, ಮರಾಠಿ ಸಾಹಿತ್ಯ-ಹೀಗೆ ಅವರ ಓದಿನ ವಿಸ್ತಾರದ ಫಲ-ಈ ಕೃತಿಯ ಮೂಲಕ ಕನ್ನಡ ಸಂಸ್ಕೃತಿಗೆ ದಕ್ಕಿದೆ.
©2024 Book Brahma Private Limited.