ಮಾನಸ ದರ್ಪಣ ಅಥವಾ ಮನಃಶಾಸ್ತ್ರದ ಮೂಲಪಾಠಗಳು

Author : ಬಿ.ಎಚ್. ಶ್ರೀಧರ

Pages 200

₹ 4.00




Year of Publication: 1973
Published by: ಮನೋಹರ ಘಾಣೇಕರ
Address: ಸಮಾಜ ಪುಸ್ತಕಾಲಯ, ಧಾರವಾಡ

Synopsys

‘ಮಾನಸ ದರ್ಪಣ ಅಥವ ಮನ:ಶಾಸ್ತ್ರದ ಮೂಲಪಾಠಗಳು’ ಕೃತಿಯು ಬಿ.ಎಚ್. ಶ್ರೀಧರ ಅವರ ಲೇಖನಸಂಕಲನವಾಗಿದೆ. ಈ ಕೃತಿಯು ಹತ್ತು ಅಧ್ಯಾಯಗಳನ್ನು ಒಳಗೊಂಡಿದೆ. ಮೊದಲನೇಯ ಅಧ್ಯಾಯನದಲ್ಲಿ, ಮನಶಾಸ್ತ್ರದ ಪ್ರಯೋಜನ, ಮನಶಾಸ್ತ್ರದ ಲಕ್ಷಣ ಮತ್ತು ಗುರಿ, ಮನಃ ಶಾಸ್ತ್ರದ ಶಾಖೆಗಳು, ಮನಃಶಾಸ್ತ್ರದ ಕ್ರಮಗಳು (ಅಂತರ್ನಿರೀಕ್ಷಣೆ) ಅಂತರ್ನಿರೀಕ್ಷಣೆಯಲ್ಲಿರುವ ದೋಷಗಳು, ಅಂತರ್ನಿರೀಕ್ಷಣೆಯ ಗುಣಗಳು, ಬಹಿರ್ನಿರೀಕ್ಷಣೆ, ಪ್ರಯೋಗವನ್ನು ಒಳಗೊಂಡಿದೆ. ಎರಡನೇಯ ಅಧ್ಯಾಯನದಲ್ಲಿ, ಕ್ಷೇಪಕ್ರಿಯೆ, ನರ ಮತ್ತು ನರಪ್ರವಾಹ, ವಿಸಂಧಿಯ ಅವರೋಧ, ಮಿದುಳಿನ ವಿಕಾಸ, ಹಳಮಿದುಳು, ಬೆನ್ನುಹುರಿ ಮತ್ತು ಕ್ಷೇಪಕ್ರಿಯೆ, ಕ್ಷೇಪಚಾಪ ಮತ್ತು ಪ್ರಜ್ಞೆ, ಕ್ಷೇಪಕ್ರಿಯೆಯಲ್ಲಿ ಮಿದುಳಿನ ಪಾತ್ರವನ್ನು ವಿವರಿಸಲಾಗಿದೆ. ಒಟ್ಟಾರೆಯಾಗಿ ಇಲ್ಲಿನ ಹತ್ತು ಅಧ್ಯಾಯಗಳು ಭಿನ್ನ ಭಿನ್ನವಾದ ವಿಚಾರಗಳನ್ನು ಪ್ರಸ್ತಾಪಿಸುತ್ತದೆ.

About the Author

ಬಿ.ಎಚ್. ಶ್ರೀಧರ
(24 April 1918 - 24 April 1990)

ಕವಿ, ಅನುವಾದಕ, ಪ್ರಬಂಧಕಾರ ಶ್ರೀಧರರು ಹುಟ್ಟಿದ್ದು ದ. ಕನ್ನಡ ಜಿಲ್ಲೆಯ ಬಿಜೂರು ಗ್ರಾಮದ ಬವಲಾಡಿಯಲ್ಲಿ. ತಂದೆ ಸೀತಾರಾಮ ಹೆಬ್ಬಾರರು, ತಾಯಿ ನಾಗಮ್ಮ. ಬಾರ್ಕೂರಿನಿಂದ ಬವಲಾಡಿಗೆ ಬಂದು ನೆಲೆಸಿದ ವಂಶಸ್ಥರು. ಪ್ರಾಥಮಿಕದಿಂದ ಹೈಸ್ಕೂಲು ವರೆಗೆ ಸೊರಬ, ಸಾಗರದಲ್ಲಿ ವಿದ್ಯಾಭ್ಯಾಸ, ಇಂಟರ್ ಮೀಡಿಯೆಟ್‌ಗೆ ಸೇರಿದ್ದು ಮೈಸೂರು. ಊಟಕ್ಕೆ ವಾರಾನ್ನ, ಪುಸ್ತಕಗಳಿಗೆ ಗ್ರಂಥಾಲಯ, ಫೀಸಿಗೆ ಸ್ಕಾಲರ್‌ಶಿಪ್, ಇಂಟರ್ ಮೀಡಿಯೆಟ್ ಮುಗಿಸಿದರು. ದೊರೆತ ಶಿಷ್ಯ ವೇತನ, ಮನೆ ಪಾಠ ಹೇಳಿ ತಂದೆಗೂ ಹಣ ಸಹಾಯ. ಬಿ.ಎ. ಆನರ್ಸ್‌ ಪಾಸು. ಹಲವಾರು ಪದಕ ಬಹುಮಾನ ಗಳಿಕೆ ಸಂತಸ. ಆದರೆ ಎಂ.ಎ. ಓದಲು ಹಣದ ಅಡಚಣೆಯಿಂದ ಬೆಂಗಳೂರಿನ ಪ್ರೆಸ್ ...

READ MORE

Related Books