`ಚಿಟ್ಟೆಸ್ಟರ’ ಭಾರತೀ ಕಾಸರಗೋಡು ಅವರ ಲಲಿತ ಪ್ರಬಂಧವಾಗಿವೆ. ಓದುತ್ತಾ ಹೋದಂತೆ ನಮಗರಿವಿಲ್ಲದಂತೆ ಆತ್ಮೀಯ ಭಾವನೆಗಳನ್ನು ಮೂಡಿಸುತ್ತ ಮೋಡಿ ಮಾಡುತ್ತ ತಮ್ಮದೇ ಭಾವನಾವಲಯಕ್ಕೆ ನಮ್ಮನ್ನೂ ಸೆಳೆಯುವ ಶಕ್ತಿಯುತವಾದ ಲಲಿತ ಪ್ರಬಂಧಗಳು. ನಮ್ಮ ಮಧ್ಯೆಯೇ ಇದ್ದರೂ ನಾವು ಗಮನಿಸದೆ ಇದ್ದಂಥ ನೂರಾರು ಅಂಶಗಳು ಮನಸ್ಸನ್ನು ಪ್ರಫುಲ್ಲಗೊಳಿಸುವ ತಿಳಿಹಾಸ್ಯದ ಕಾರಂಜಿಗಳು.
ಕನ್ನಡ ಬರಹಗಾರ್ತಿ ಭಾರತೀ ಕಾಸರಗೋಡು ಅವರು ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರ ಮೊದಲನೆಯ ಕೃತಿ ವೀಣೆಯ ನೆರಳಲ್ಲಿ, ಡಾ. ವಿ.ದೊರೆಸ್ವಾಮಿ ಅಯ್ಯಂಗಾರ್ ಅವರ ಜೀವನವನ್ನು ಕುರಿತದ್ದು. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಮತ್ತು ಅತ್ತಿಮಬ್ಬೆ ಬಹುಮಾನಗಳು ದಕ್ಕಿವೆ. ಬೆಂಗಳೂರಿನಲ್ಲಿ ವಾಸಿಸುತ್ತಿರುವ ಭಾರತಿಯವರ ಇತರ ಪ್ರಕಟಿತ ಪುಸ್ತಕಗಳು ಚಂದನ (ಪ್ರಬಂಧ ಸಂಕಲನ), ರಾಸದರ್ಶನ (ತಂದೆ ಶ್ರೀ ಸಮೇತನಹಳ್ಳಿ ರಾಮರಾಯರಿಗೆ ಅರ್ಪಿಸಿದ ಅಭಿನಂದನ ಗ್ರಂಥ), ಜೀವಿ: ಜೀವ--ಭಾವ (ವಿದ್ವಾಂಸ ಶ್ರೀ ಜಿ. ವೆಂಕಟಸುಬ್ಬಯ್ಯ ಅವರ ಸಂಕ್ಷಿಪ್ತ ಜೀವನ ಚರಿತ್ರೆ), ಮತ್ತು ಬಂಧಬಂಧುರ (ಸಂಪಾದಿತ ...
READ MOREಹೊಸತು-2004- ಸಪ್ಟಂಬರ್
ಓದುತ್ತಾ ಹೋದಂತೆ ನಮಗರಿವಿಲ್ಲದಂತೆ ಆತ್ಮೀಯ ಭಾವನೆ ಗಳನ್ನು ಮೂಡಿಸುತ್ತ ಮೋಡಿ ಮಾಡುತ್ತ ತಮ್ಮದೇ ಭಾವನಾವಲಯಕ್ಕೆ ನಮ್ಮನ್ನೂ ಸೆಳೆಯುವ ಶಕ್ತಿಯುತವಾದ ಲಲಿತ ಪ್ರಬಂಧಗಳು. ನಮ್ಮ ಮಧ್ಯೆಯೇ ಇದ್ದರೂ ನಾವು ಗಮನಿಸದೆ ಇದ್ದಂಥ ನೂರಾರು ಅಂಶಗಳು ಮನಸ್ಸನ್ನು ಪ್ರಫುಲ್ಲಗೊಳಿಸುವ ತಿಳಿಹಾಸ್ಯದ ಕಾರಂಜಿಗಳು. ಘಟನೆಗಳ ನಿರೂಪಣೆಯಿಂದ ಹೊರಹೊಮ್ಮಿದ ಗಂಭೀರ ಚಿಂತನೆಗಳು ಇವೆಲ್ಲ ಸೇರಿ ಒಂದು ಪ್ರಬುದ್ಧ ಬರವಣಿಗೆಯನ್ನು ನಾವಿಲ್ಲಿ ಓದಬಹುದು. ಎಲ್ಲರಿಗೂ ಸುಲಭವಾಗಿ ದಕ್ಕದ ಭಾಷಾಶೈಲಿಯಂತೂ ಭಾರತೀಯವರ ಬೆನ್ನು ಹತ್ತಿ ಬಂದಂತಿದ್ದು ಒಂದೊಂದು ಲೇಖನ ಓದಿದಾಗಲೂ ಒಂದೊಂದು ಹೂವನ್ನು ಆಘ್ರಾಣಿಸಿದಷ್ಟು ಸಂತೋಷ-ಸಂಭ್ರಮ ! ನೋಡುವ ಕಣ್ಣು ಮತ್ತು ತಿಳಿಯುವ ಆಸಕ್ತರಿಗೆ ಇಲ್ಲಿ ಆಸ್ವಾದಿಸಲು ಅಸಂಖ್ಯಾತ ವಿಷಯಗಳಿವೆ; ಸ್ವಾರಸ್ಯಕರವಾಗಿವೆ.