'ಪರಿಭಾಷೆ' ಡಾ. ಮಾಧವ ಪೆರಾಜೆ ಅವರ ಸಾಹಿತ್ಯ-ಸಂಸ್ಕೃತಿ- ಚರಿತ್ರೆಗಳಿಗೆ ಸಂಬಂಧಿಸಿದ ಪ್ರಬಂಧ ಸಂಕಲನ. ವಿಸ್ತಾರ ಓದಿನ ಅನುಭವದಿಂದ ಮಾಧವ ಪೆರಾಜೆ ಅವರು ದಕ್ಷಿಣ ಭಾರತದ ವಿಭಿನ್ನ ಸಂಸ್ಕೃತಿಗಳ ಪರಿಚಯವನ್ನು ಈ ಕೃತಿಯಲ್ಲಿ ಮಾಡಿಕೊಟ್ಟಿದ್ದಾರೆ. ಇಲ್ಲಿ ಕ್ರಿಸ್ತಪೂರ್ವ ಕಾಲದಿಂದ ಆರಂಭಿಸಿ 2008ರವರೆಗಿನ ಕೃತಿಗಳ ವಿಮರ್ಶೆಗಳೂ ಇವೆ. ಸಾಹಿತ್ಯಿಕ ರೂಪದಲ್ಲಿರಲಿ, ಚಾರಿತ್ರಿಕ ನಡೆಯಿರಲಿ ಇವುಗಳ ಮೂಲಕ ಹಾದು ಬಂದ ಒಂದಿಡೀ ಸಂಸ್ಕೃತಿಯ ಪರಿಸರವನ್ನಿಲ್ಲಿ ಕಾಣಬಹುದಾಗಿದೆ
ಪುಸ್ತಕ ಪರಿಚಯ- ಕೃಪೆ- ಹೊಸತು
ಇವು ಸಾಹಿತ್ಯ-ಸಂಸ್ಕೃತಿ- ಚರಿತ್ರೆಗಳಿಗೆ ಸಂಬಂಧಿಸಿದ ಪ್ರಬಂಧಗಳು, ಡಾ|| ಮಾಧವ ಪೆರಾಜೆ ಅವರು ತಮ್ಮ ಬಹು ವಿಸ್ತಾರವಾದ ಓದಿನ ಫಲವಾಗಿ ದಕ್ಷಿಣ ಭಾರತದ ಆನೇಕ ಸಂಸ್ಕೃತಿಗಳ ಪರಿಚಯ ಮಾಡಿಸಿಕೊಟ್ಟಿದ್ದಾರೆ. ಪ್ರಸ್ತುತ ಪುಸ್ತಕದಲ್ಲಿ ಕ್ರಿಸ್ತಪೂರ್ವ ಕಾಲದಿಂದಲೂ ಪ್ರಾರಂಭಿಸಿ ಇತ್ತೀಚಿನವರೆಗಿನ ಕೃತಿ ವಿಮರ್ಶೆಗಳೂ ಇವೆ. ಸಾಹಿತ್ತಿಕ ರೂಪದಲ್ಲಿರಲಿ, ಚಾರಿತ್ರಿಕ ನಡೆಯಿರಲಿ ಇವುಗಳ ಮೂಲಕ ಹಾದು ಬಂದ ಒಂದು ಸಂಸ್ಕೃತಿ ಪರಿಸರವನ್ನಿಲ್ಲಿ ಕಾಣಬಹುದು. ಆ ಕಾಲದ ನಮ ಜಾನಪದ ಸಂಪತ್ತು, ಸಾಮಾನ್ಯ ಜನರ ಜೀವನ, ರಾಜ ಮಹಾರಾಜರ ಉಚ್ಚಾಯ ಅವನತಿ, ಅ೦ದಿನ ಧಾರ್ಮಿಕ ನೆಲೆಗಳು ಇವನ್ನೆಲ್ಲ ಓದಿನ ಮೂಲಕ ಶೋಧಿಸಿ ಗ್ರಹಿಸಿದ್ದು ಪುಸ್ತಕ ರೂಪದಲ್ಲಿ ಲೇಖಕರು ದಾಖಲಿ ಸಿದ್ದಾರೆ. ಸಂಶೋಧನಾ ವಿದ್ಯಾರ್ಥಿಗಳಿಗೆ ಬಹಳಷ್ಟು ಮಾಹಿತಿ ಇದೆ. ಪ್ರಾಚೀನ ಕಾಲದ ಕಾವ್ಯಸಂಪತ್ತನ್ನು ವಿಶ್ಲೇಷಣೆಗೆ ಇಲ್ಲಿ ಚೆನ್ನಾಗಿ ಬಳಸಿಕೊಳ್ಳಲಾಗಿದೆ.
©2024 Book Brahma Private Limited.