ಲೇಖಕಿ ಅಂಬಮ್ಮ ಪ್ರತಾಪಸಿಂಗ್ ಅವರ ಕೃತಿ-ವಿಚಾರಧಾರೆ. ತಮ್ಮ ಚಿಂತನೆ, ಭಾವನೆ, ಅನುಭವಗಳ ಒಟ್ಟು 19 ಪ್ರಬಂಧಗಳು- ಈ ಕೃತಿ. ಗ್ರಾಮೀಣಾಭಿವೃದ್ದಿಯ ಪರಿಣಾಮಕಾರಿ ಅನುಷ್ಠಾನ, ಪ್ರಜಾಪ್ರಭುತ್ವಕ್ಕೆ ಬಹುದೊಡ್ಡ ಸವಾಲಾಗಿರುವ ಭ್ರಷ್ಟಾಚಾರ, ವಿದೇಶಿ ನೇರ ಬಂಡವಾಳ ಹೂಡಿಕೆಯಿಂದಾಗುವ ಅನಾನುಕೂಲ, ರೈತರ ಸಮಸ್ಯೆ, ಶ್ರಮಸಂಸ್ಕೃತಿಯ ಶ್ರೇಷ್ಠತೆ, ನಮಗೆಲ್ಲ ಚಿರಂತನ ಸ್ಫೂರ್ತಿಯಾಗಿರುವ ಬಸವೇಶ್ವರರ ನೆನಪು, ವಚನಗಳಲ್ಲಿ ವ್ಯಕ್ತಿತ್ವ ವಿಕಸನದ ನೆಲೆ-ಬೆಲೆ, ಮತದಾನ ಕಡ್ಡಾಯವಾಗಬೇಕೆ? ಮೊಬೈಲ್ ಬಳಕೆಯ ಸಾಧಕ ಬಾಧಕವೇನು? ಸಾಮಾಜಿಕ ಜಾಲತಾಣಗಳ ಇತಿಮಿತಿಗಳೇನು? ಮುಂತಾದ ಹತ್ತು ಹಲವು ವಿಚಾರಗಳನ್ನು ಲೇಖಕಿ ಚರ್ಚೆಗೊಳಪಡಿಸಿದ್ದಾರೆ.
ಲೇಖಕಿ ಅಂಬಮ್ಮ ಪ್ರತಾಪ್ ಸಿಂಗ್ ಅವರು ಮೂಲತಃ ರಾಯಚೂರಿನ ಮಾನ್ವಿಯವರು. ವೃತ್ತಿಯಿಂದ ಶಿಕ್ಷಕಿ. ಪ್ರಕಟಿತ ಕೃತಿಗಳು: ವಿಚಾರಧಾರೆ-ಪ್ರಬಂಧ ಸಂಕಲನ, ಮನಸ್ಸು-ಕವನ ಸಂಕಲನ, ಜೀವನ ಪಥ-ಚಿಂತನಾ ಲೇಖನಗಳ ಸಂಗ್ರಹ. ...
READ MORE