ಲೇಖಕ ವಿನಾಯಕ ಅರಳಸುರಳಿ ಅವರ ‘ನವಿಲುಗರಿ ಮರಿ ಹಾಕಿದೆ’ ಕೃತಿಯು ಲಲಿತ ಪ್ರಬಂಧವಾಗಿದೆ. ಕನ್ನಡ ಪುಸ್ತಕ ಪ್ರಾಧಿಕಾರದ ಧನಸಹಾಯವನ್ನು ಈ ಕೃತಿ ಪಡೆದುಕೊಂಡಿದೆ. ವಿಜಯೇಂದ್ರ ಪಾಟೀಲ ಅವರು ಈ ಕೃತಿಗೆ ಮುನ್ನುಡಿ ಬರೆದಿದ್ದು, ಲಲಿತ ಪ್ರಬಂಧ ಸಾಗುತ್ತ ಸಾಗುತ್ತ ಯಾವಾಗ ಹರಟೆಯಾಗುತ್ತದೋ , ಯಾವಾಗ ಹಾಸ್ಯ ಲೇಖನವಾಗುತ್ತದೋ, ಯಾವ ಘಳಿಗೆಯಲ್ಲಿ ಕತೆಯಾಗುವತ್ತ ಹೊರಟುಹೋಗುತ್ತದೋ ಹೇಳುವುದೇ ಕಷ್ಟ. ಹಾಗೆ ನೋಡಿದರೆ ವಿನಾಯಕರ ಬರಹಗಳಲ್ಲಿ ಲಲಿತ ಪ್ರಬಂಧದ ಲಕ್ಷಣಗಳಿರುವ ಲೇಖನಗಳೇ ಹೆಚ್ಚು ಎಂದಿದ್ದಾರೆ. ಕಾಣದ ಕೈ ಎಲ್ಲಾ ಕದ್ದು, ಬಸ್ಸೆನ್ನುವ ಸಂಭ್ರಮಗಲ ಸಾಗಣೆಕಾರ, ಕನ್ಯಾ ನೋಡಾಕ ಹೊಂಟೀನ್ರೀ!, ಅಮ್ಮನಿಗೊಂದು ಸ್ಮಾರ್ಟ್ ಫೋನ್, ಬೆಳಕನು ಚೆಲ್ಲಿ ಬಂದೇ ಬಂತು ದೀಪಾವಳಿ, ಮೂಡುಗುಡ್ಡೆ ಪ್ರೀಮಿಯರ್ ಲೀಗ್!, ಭಾನುವಾರದ ಸಿನಿಮಾ, ತಿಗಣೆಯೆನ್ನುವ ರಕ್ತಬೀಜಾಸುರರು!, ಡಿಸೆಂಬರ್ ಎಂದರೆ ಪ್ರವಾಸಗಳ ನೆನಪು.., ಮಳೆಗಾಲ ಬಂತೋ ಮಲೆನಾಡ ಶಾಲೆಗೆ, ಮದುವೆ ಛತ್ರದ ಚಿತ್ರಗಳು, ಬ್ಯಾಚುಲರ್ ಬದುಕಿನ ಬಾನ್ಗಡಿಗಳು, ಬಾಬಣ್ಣನಂಗಡಿಯೆಂಬ ನಮ್ಮೂರ ಬಿಗ್ ಬಜಾರ್!..ಹೀಗೆ 13 ಶೀರ್ಷಿಕೆಗಳನ್ನು ಹೊತ್ತ ಲಲಿತ ಪ್ರಬಂಧಗಳು ಈ ಕೃತಿಯಲ್ಲಿ ಓದಿಗೆ ಲಭ್ಯ.
ಶಿವಮೊಗ್ಗ ಜಿಲ್ಲೆ,ತೀರ್ಥಹಳ್ಳಿ ತಾಲ್ಲೂಕಿನ ಅರಳಸುರುಳಿ ಗ್ರಾಮದಲ್ಲಿ 1991, ಏಪ್ರಿಲ್ 19ರಂದು ಜನಿಸಿದ ವಿನಾಯಕ ಅರಳಸುರುಳಿಯವರು, ಕೃಷಿ ಕುಟುಂಬದ ಹಿನ್ನಲೆಯವರು. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಾದ ಅರಳಸುರಳಿಯಲ್ಲಿ ಪಡೆದ ಇವರು, ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದಲ್ಲಿ 2011-12ನೆಯ ಸಾಲಿನಲ್ಲಿ ಕಾಮರ್ಸ್ ವಿಭಾಗದಲ್ಲಿ ಪದವಿ ಶಿಕ್ಷಣವನ್ನು ಪೂರೈಸಿದರು. ನಂತರ ಎಂಟು ವರ್ಷಗಳ ಕಾಲ ಬೆಂಗಳೂರಿನ ಖಾಸಗೀ ಸಂಸ್ಥೆಗಳಲ್ಲಿ ಅಕೌಂಟ್ಸ್ ಹುದ್ದೆಯಲ್ಲಿ ಕಾರ್ಯನಿರ್ವಹಿಸಿ, ಪ್ರಸ್ತುತ ಹುಟ್ಟೂರಿನಲ್ಲಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಹವ್ಯಾಸೀ ಬರಹಗಾರರಾಗಿದ್ದು, ಕವನ ಲಲಿತ ಪ್ರಬಂಧ ಹಾಗೂ ಸಣ್ಣಕತೆಗಳನ್ನು ಬರೆದಿದ್ದಾರೆ. ಮೈಸೂರು ಅಸೋಸಿಯೇಶನ್-ಮುಂಬೈ ಇವರು 2016ರಲ್ಲಿ ನಡೆಸಿದ ‘ಮಾಸ್ತಿ ಸ್ಮರಣಾರ್ಥ ನೇಸರು ಜಾಗತಿಕ ಸಣ್ಣಕತೆ ...
READ MORE