ಪಾರಿವಾಳಗಳು ಅಂದಾಕ್ಷಣ ನೆನಪಾಗೋದು ಪ್ರೇಮ ಸಂದೇಶ ರವಾನೆ ಮಾಡುತ್ತಿದ್ದ ಶಾಂತಿಯ ದ್ಯೋತಕ ಜೀವಿ, ಆದರೆ ಅವುಗಳ ಪ್ರಿಯವಾದ ಜಾಗ ಮನೆಯ ಬಾಲ್ಕನಿ, ಪಾರಿವಾಳಗಳನ್ನು ಓಡಿಸಲು ಹೊರಟು ತಾವೇ ಫಜೀತಿಗೊಳಗಾದ ರೀತಿ, ಬೆಂಗಳೂರು ಟ್ರಾಫಿಕ್..... ಹೀಗೆ ಲೇಖಕ ನಿಜ ಜೀವನದಲ್ಲಾದ ಘಟನೆಗಳನ್ನು ಆಧರಿಸಿ ಬರೆದಿರುವ ಪ್ರಬಂಧಗಳೇ ಪಾರಿವಾಳಗಳು. ಪಾರಿವಾಳಗಳ ತೊಂದರೆ, ಬೆಂಗಳೂರಿನ ಟ್ರಾಫಿಕ್ ಸಮಸ್ಯೆ, ಅಮೇರಿಕಾದಲ್ಲಿ ಭಾರತೀಯರ ಜೀವನ ಮುಂತಾದ ಹಲವಾರು ಪ್ರಬಂಧಗಳು ವ್ಯಂಗ್ಯ ಹಾಗೂ ಹಾಸ್ಯದ ನಿರೂಪಣೆಯಲ್ಲಿ ಬರೆಯಲಾಗಿದೆ.
ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ವಿಠ್ಠಲ್ ಶೆಣೈ ಅವರು ಮೂಲತಃ ಮಂಗಳೂರಿನವರು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದು, ತಾವು ಓದಿದ ಪುಸ್ತಕಗಳ ಬಗ್ಗೆ ತಮ್ಮ ಬ್ಲಾಗ್‌ಗಳಲ್ಲಿ ಬರೆಯುವ ಹವ್ಯಾಸ ಉಳ್ಳವರು. ಕೃತಿಗಳು: ಪಾರಿವಾಳಗಳು (ಲಲಿತ ಪ್ರಬಂಧಗಳು) ಹಾಗೂ ತಾಳಿಕೋಟೆಯ ಕದನದಲ್ಲಿ (ಕಾದಂಬರಿ) , ಹುಲಿ ವೇಷ (ಕತೆಗಳ ಸಂಕಲನ) ಹಾಗೂ ನಿಗೂಢ ನಾಣ್ಯ (ಕಾದಂಬರಿ) ...
READ MORE