ಆರ್. ನಿರ್ಮಲಾ ಅವರು ಬರೆದಿರುವ ಪ್ರಬಂಧಗಳ ಸಂಕಲನವಾದ ’ಚಲ್ ಮೇರಿ ಲೂನಾ’ ಇವರ ಮೊದಲ ಪ್ರಕಟಿತ ಕೃತಿಯಾಗಿದೆ.
ಲೇಖಕಿಯ ಕಾಲೇಜು ದಿನಗಳ ಹತ್ತಿರದ ಅನುಭವಗಳನ್ನು ಪ್ರಬಂಧಗಳ ಮೂಲಕ ಈ ಕೃತಿಯಲ್ಲಿ ಸೇರಿಸಿದ್ದಾರೆ. ಮೈಸೂರಿನಿಂದ ಇದ್ದಕ್ಕಿದ್ದಂತೆ ಮಂಡ್ಯಾದ ಸರ್ಕಾರಿ ಕಾಲೇಜಿಗೆ ವರ್ಗವಾಗಿ ಆಗಿನ ನಿತ್ಯದ ಪ್ರಯಾಣವನ್ನು ಕುರಿತಾದ ಎರಡು ಪ್ರಬಂಧಗಳಿವೆ. ಮೈಸೂರಿನಿಂದ ರೈಲಿನಲ್ಲಿ ಹೊರಟು ಮಂಡ್ಯಾ ಸೇರುವವರೆಗಿನ ಹಳ್ಳಿಗಳು, ಇತಿಹಾಸದಲ್ಲಿ ದಾಖಲಾಗಿರುವ ಊರುಗಳು, ಪುರಾಣಗಳು ಇತ್ಯಾದಿಗಳನ್ನೊಳಗೊಂಡ ’ಹಸಿರದಾರಿ’ ಮತ್ತು ಮೈಸೂರು -ಮಂಡ್ಯಾ ನಡುವೆ ಪ್ರಯಾಣ ಮಾಡುವಾಗ ಅನುಭವಿಸಿದ್ದನ್ನು ಹೇಳುವ ಪ್ರಯಾಣಕಾಲ ಎಂಬ ಎರಡು ಬರಹಗಳಿವೆ.
ಈ ಸಂಕಲನದಲ್ಲಿರುವ ಇಪ್ಪತ್ತೆರಡು ಪ್ರಬಂಧಗಳಲ್ಲಿ ವಿಷಾದ, ತೆಳುಹಾಸ್ಯವನ್ನು ಹೆಚ್ಚಾಗಿ ಗಮನಿಸಬಹುದು. ಸ್ತ್ರೀ ಜಗತ್ತಿನ ಒಳಮುಖಗಳನ್ನುಹಿಡಿದಿಡುವ ನಿಟ್ಟಿನಲ್ಲಿ ಇವರ ಬರಹಗಳು ಸಾಗಿವೆ.
ನಲ್ದಾಣ, ಅಂಟಿದನಂಟು, ಆ ಬಿಸಿಲಕೋಲು, ಹಸಿರ ದಾರಿ, ಪ್ರಯಾಣ ಕಾಲ, ಅಜ್ಜಿಯ ಕೈತುತ್ತು, ರಸ್ತೆ, ಕರಗದಿರಿ ಗುಡ್ಡಗಳೇ, ಕೈಹಿಡಿದವರು, ನಾಮಫಲಕ,ಕದಿಯಲಾಗದ ಹೂವುಗಳು, ಹುಡುಕಾಟದ ಮೋಜು, ಕಾಡದಿರಿ ನೆನಪುಗಳೆ, ಚಲ್ ಮೇರಿ ಲೂನಾ, ಸಣ್ಣ ಸಂಗತಿ, ಹಳದಿ ಎಲೆ, ಬಾ ಮೋಡವೆ…, ಕತೆ-ದಂತಕತೆ, ಸೆರಗ ಬಿಡು ಮರುಳೆ, ಮನದ ಮೂಲೆಯ ಮಾತು ಮುಂತಾದ ಪ್ರಬಂದ ಬರಹಗಳನ್ನು ಈ ಕೃತಿ ಒಳಗೊಂಡಿದೆ.
©2024 Book Brahma Private Limited.