ಮಿಲ್ಟ್ರಿಟ್ರಂಕು ಲಕ್ಷ್ಮಣ ವಿ.ಎ ಅವರ ಕೃತಿಯಾಗಿದೆ. ಬಾಲ್ಯಕಾಲದ ಮುಗ್ಧ ನಂಬಿಕೆಗಳು ಭಗ್ನವಾದ ಬಳಿಕ ಮತ್ತು ವೈಚಾರಿಕ ದೂರದಿಂದ ಪರಿಸರವನ್ನು ನೋಡುವುದರಿಂದ ಹುಟ್ಟಿರುವ ಚಿಂತನಶೀಲತೆ, ಇಲ್ಲಿನ ಬರೆಹವನ್ನು ರೂಪಿಸಿದೆ. ಆನುಭವವು ಚಿಂತನೆಗೆ ಬುನಾದಿಯಾಗುವ ಅಥವಾ ಚಿಂತನೆಯು ಅನುಭವಕ್ಕೆ ಚೌಕಟೊಂದನ್ನು ಕಟ್ಟುವ ಕಡೆಯಲ್ಲಿಲ್ಲ. ಬರಹ ವಾರ್ಶನಿಕವಾಗುತ್ತದೆ. ಸಹಜವಾದ ವಿವರಗಳು ದೊಡ್ಡ ಅರ್ಥವನ್ನು ಕೊಡುವ ಸಂಕೇತಗಳಾಗುತ್ತವೆ. ಉದಾಗೆ, ಮಗನನ್ನು ಆಸ್ಪತ್ರೆಗೆ ಕರೆದೊಯ್ಯುವ ತಂದೆ ರಸ್ತೆಬದಿ ವಾಹನಕ್ಕೆ ಕಾಯುವ ಪ್ರಸಂಗವನ್ನು ಗಮನಿಸಬಹುದು. ಬತ್ತಿಕಟ್ಟುವ, ಚಪ್ಪಲಿ ಕಳೆದುಹೋಗದಂತೆ ವಿಶಿಷ್ಟ ಗುರುತು ಮಾಡುವ, ಪಂಡರಪುರಕ್ಕೆ ಯಾತ್ರೆ ಹೋಗುವ, ಹೈನ ಮುಗಿದರೂ ಹಾಲುತುಪ್ಪದ ವಾಸನೆ ಪರಿಮಳ ಬೀರುವ ಕಪಾಟುಗಳು, ಪರಿಮಳ ಬೀರುವ ಎಲಿಟ್ಟು ಟ್ರಂಕು ಇತ್ಯಾದಿ ಪ್ರಸಂಗಗಳಲ್ಲಿ, ವಿವರಗಳನ್ನು ಸೂಕ್ಷ್ಮವಾಗಿ ದಾಖಲಿಸುವ ಶ್ರದ್ಧೆಯಿಂದ ಇಲ್ಲಿನ ನೆನಪುಗಳಿಗೆ ಒಂದು ಬಗೆಯ ಜೈವಿಕ ಸದ್ಭುದ್ಧತೆ ಒದಗಿದೆ, ಕೆಲವು ನೆನಪುಗಳಂತೂ ಕಾವ್ಯಾತ್ಮಕವಾಗಿಯೂ ದಾರ್ಶನಿಕವಾಗಿಯೂ ಆಗಿದ್ದು, ಸುಂದರ ಪ್ರಬಂಧಗಳಾಗಿವೆ.
ಡಾ. ಲಕ್ಷ್ಮಣ ವಿ.ಎ ಮೂಲತಃ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮೋಳೆ ಗ್ರಾಮದವರು. ಮಹಾಗಣಪತಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ಪದವಿ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದಾರೆ. ಓದು, ಬರಹವನ್ನು ಹವ್ಯಾಸವಾಗಿಸಿಕೊಂಡಿರುವ ಲಕ್ಷ್ಮಣ್ ಅವರು ಎಲೆಕ್ಟ್ರಿಕ್ ಬೇಲಿ ಮತ್ತು ಪಾರಿವಾಳ ಎಂಬ ಕವನ ಸಂಕಲವನ್ನು ಪ್ರಕಟಿಸಿದ್ದಾರೆ. ಪ್ರಸ್ತುತ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಖಾಸಗೀ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಅಪ್ಪನ ಅಂಗಿ’ ಅವರ ಇತ್ತಿಚಿನ ಕೃತಿ. ...
READ MOREhttps://epaper.vishwavani.news/bng/e/bng/12-03-2023/16