‘ಜುಂಜಪ್ಪ: ಕಾಡುಗೊಲ್ಲ ಬುಡಕಟ್ಟಿನ ಜನಪ್ರಿಯ ಸಾಂಸ್ಕೃತಿಕ ವೀರ’ ಕೃತಿಯು ಮೀರಾಸಾಬಿಹಳ್ಳಿ ಶಿವಣ್ಣ ಅವರ ಮಹಾಪ್ರಬಂಧ ಕೃತಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಜುಂಜಪ್ಪನ ಕುರಿತು ಗೊಲ್ಲ ಸಮುದಾಯದ ಹಿರಿಯರು ವಿವಿಧ ಸಂದರ್ಭಗಳಲ್ಲಿ ಪುನರ್ ಸೃಷ್ಟಿಸಿದ ಅಪೂರ್ಣ ಕತೆಗಳನ್ನು ಇಟ್ಟುಕೊಂಡು ಸಮಗ್ರ ಚಿತ್ರಣ ದೊರೆಯುವ ಹಾಗೆ ಕತೆಗಳನ್ನು ಶಿವಣ್ಣ ಇಲ್ಲಿ ಪುನರ್ರಚಿಸಿದ್ದಾರೆ. ಎತ್ತಪ್ಪ – ಜುಂಜಪ್ಪರ ಕುರಿತು ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಸುದೀರ್ಘ ಕ್ಷೇತ್ರ ಕಾರ್ಯಧಾರಿತ ಮಹಾಪ್ರಬಂಧ ರಚಿಸಿರುವ ಶಿವಣ್ಣ ಅವರು ಅಲ್ಲಿನ ಅಡಿಟಿಪ್ಪಣಿ ಹಾಗೂ ಗಂಭೀರ ಭಾಗಗಳನ್ನು ತೆಗೆದುಹಾಕಿ ಸರಳಗೊಳಿಸಿ ಜನಸಾಮಾನ್ಯರಿಗೆ ಎಟುಕುವಂತೆ ಈ ಕತೆಗಳನ್ನು ಕಟ್ಟಿಕೊಟ್ಟಿದ್ದಾರೆ. ಜನಪ್ರಿಯ ಮಾಸಿಕ `ಮಯೂರ‘ದಲ್ಲಿ ಈಗಾಗಲೇ ಇಲ್ಲಿನ ಬಹುತೇಕ ಕತೆಗಳು ಪ್ರಕಟವಾಗಿವೆ. ಜಿ.ಕೆ.ಶಿವಣ್ಣನವರ ಅರ್ಥಗರ್ಭಿತ ರೇಖಾಚಿತ್ರಗಳು ಹಾಗೂ ಕೃಷ್ಣ ರಾಯಚೂರು ಅವರ ಮುಖಪುಟ ವಿನ್ಯಾಸದೊಂದಿಗೆ ಈ ಕೃತಿಯು ಮೂಡಿಬಂದಿದೆ.
ಚಿತ್ರದುರ್ಗ ಜಿಲ್ಲೆಯ ಆಂಧ್ರಗಡಿಯಂಚಿನ ಚಳ್ಳಕೆರೆ ತಾಲ್ಲೂಕಿನ ಮೀರಾಸಾಬಿಹಳ್ಳಿಯವರಾದ ಡಾ. ಮೀರಾಸಾಬಿಹಳ್ಳಿ ಶಿವಣ್ಣ (1952) ಜಾನಪದ ವಿದ್ವಾಂಸರು. ಮೀರಾಸಾಬಿಯಳ್ಳಿಯ ಪಟೇಲರಾದ ಪಟೇಲ್ ಬೊಮ್ಮೇಗೌಡ ಅವರ ತಂದೆ. ಕರಿಯಮ್ಮ ತಾಯಿ. ಕೃಷಿಕ ಕುಟುಂಬದಲ್ಲಿ ಜನಿಸಿದ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಬಿ.ಎ. (ಆನರ್) (1972). ಎಂ.ಎ. (1974) ಪದವಿ ಪಡೆದವರು. ಮೈಸೂರು ವಿಶ್ವವಿದ್ಯಾನಿಲಯದಿಂದ “ಕಾಡುಗೊಲ್ಲರ ಇಬ್ಬರು ಸಾಂಸ್ಕತಿಕ ವೀರರು (ಎತ್ತಪ್ಪ-ಮುಂಜಪ)- ಒಂದು ಅಧ್ಯಯನಕ್ಕಾಗಿ ಪಿಎಚ್.ಡಿ (1996) ಪದವಿ ದೊರೆಯಿತು. ಎರಡು ಬಾರಿ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿ (1984-1987 ಮತ್ತು 1998-2001) ಸೇವೆ ಸಲ್ಲಿಸಿರುವ ಅವರಿಗೆ ಜಾನಪದ ಕ್ಷೇತ್ರಕಾರ್ಯಕ್ಕಾಗಿ ಜಿ.ಶಂ.ಪ ಜಾನಪದ ತಜ್ಞ ಪ್ರಶಸ್ತಿ' (2011) ನೀಡಿ ...
READ MORE