‘ಆಧುನಿಕತೆ ಮತ್ತು ಸಾಹಿತ್ಯ’ ಲೇಖಕ ರಾಮಚಂದ್ರದೇವ ಅವರ ಪ್ರಬಂಧ ಸಂಕಲನ. 1992ರ ಆಗಸ್ಟ್ 19ರಂದು ಬೆಂಗಳೂರಿನ ವಿದ್ಯಾವರ್ಧಕ ಸಂಘದ ಮಹಿಳಾ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ `ಆಧುನಿಕತೆ ಮತ್ತು ಸಾಹಿತ್ಯ' ವಿಷಯದ ಬಗ್ಗೆ ಸಾಹಿತ್ಯ ವಾಹಿನಿ ಉಪನ್ಯಾಸ ಮಾಲಿಕೆಯಲ್ಲಿ ಡಾ. ರಾಮಚಂದ್ರದೇವ ಅವರಿಂದ ಏರ್ಪಡಿಸಿದ್ದ ಕಾರ್ಯಕ್ರಮದ ವಿಸೃತ ರೂಪವೇ ಈ ಪ್ರಬಂಧ ಸಂಕಲನ.
ಪ್ರತಿಭಾ ಯುವ ವೇದಿಕೆ ಸಾಹಿತ್ಯ-ಸಾಂಸ್ಕೃತಿಕ ವಿಷಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದ ಗುಂಪು. ಸಾಹಿತ್ಯಿಕ ಸಂವಾದ, ಕವಿಗೋಷ್ಠಿ, ರಂಗಪ್ರಯೋಗ, ಸಾರ್ವಜನಿಕ ಹಾಗೂ ಕನ್ನಡ ಪರ ಕೆಲಸದಳು, ಶಿಕ್ಷಣ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮಗಳು, ಹದಿಹರೆಯದವರನ್ನು ಗಮನದಲ್ಲಿ ಇಟ್ಟುಕೊಂಡು ಹಲವು ಪುಸ್ತಕಗಳನ್ನು ಹೊರತಂದಿದೆ. ಸೃಜನಶೀಲತೆಯ ಭಾಗಶಃ ಎಲ್ಲ ಪ್ರಕಾರಗಳಲ್ಲೂ ಈ ಕೃತಿ ಅನನ್ಯತೆ ಮೆರೆದಿದೆ.
ಕತೆಗಾರ-ನಾಟಕಕಾರ ರಾಮಚಂದ್ರದೇವ ಅವರು ಕನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬರು. 1948ರ ಮಾರ್ಚ್ 22ರಂದು ಜನಿಸಿದರು. ಕಲ್ಲಡ್ಕ, ಬಾಳ್ತಿಲ, ಪಂಜ, ಪುತ್ತೂರುಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ನಡೆಸಿದ ದೇವ ಅವರು ಮೈಸೂರಿನ ಮಹಾರಾಜಾ ಕಾಲೇಜಿನಿಂದ ಕನ್ನಡ, ಇಂಗ್ಲಿಷ್ ಭಾಷಾಶಾಸ್ತ್ರ, ಹಿಂದಿಗಳನ್ನು ವಿಶೇಷ ವಿಷಯಗಳನ್ನಾಗಿ ತೆಗೆದುಕೊಂಡು ಬಿ.ಎ. ಪದವಿ ಹಾಗೂ ಮಾನಸ ಗಂಗೋತ್ರಿಯಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದರು. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಶೇಕ್ಸ್‌ಪಿಯರ್ ಅನುವಾದಗಳ ತೌಲನಿಕ ಅಧ್ಯಯನಕ್ಕಾಗಿ ಪಿಎಚ್. ಡಿ. ಪಡೆದರು. ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು, ಮೈಸೂರಿನ ಬನುಮಯ್ಯ ಕಾಲೇಜು, ಬೆಂಗಳೂರು ಬಸವನಗುಡಿಯ ನ್ಯಾಷನಲ್ ಕಾಲೇಜು, ಕುವೆಂಪು ವಿಶ್ವವಿದ್ಯಾನಿಲಯಗಳಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಕಾರ್ಯ ...
READ MORE