ಪರಿಗ್ರಹ

Author : ಟಿ.ಜಿ. ರಾಘವ

Pages 160

₹ 75.00




Published by: ಆನಂದಕಂದ ಗ್ರಂಥಮಾಲೆ
Address: ಬಲರಾಮ ಟೀಚರ್‍ಸ್ ಕಾಲೋನಿ ಮಲ್ಲಾಡಿಹಳ್ಳಿ -577531
Phone: 9448038396

Synopsys

‘ಪರಿಗ್ರಹ’ ಕೃತಿಯು ಟಿ.ಜಿ ರಾಘವ ಅವರ ಪ್ರಬಂಧಗಳ ಸಂಕಲನವಾಗಿದೆ. ಅಡಿಗರ ಕುರಿತ ಲೇಖನದಲ್ಲಿ ರಾಘವ ಮತ್ತು ಅಡಿಗರ ಗುರುಶಿಷ್ಯ ಸಂಬಂಧ, ಸ್ನೇಹ, ಅಡಿಗರ ನಿಷ್ಟುರ ನಿಲುವು ಕಾಣಸಿಗುತ್ತದೆ. ಲಕ್ಷ್ಮೀನಾರಾಯಣ ಭಟ್ಟರು ಮುನ್ನುಡಿ ಬರೆದಿದ್ದಾರೆ. 

About the Author

ಟಿ.ಜಿ. ರಾಘವ
(28 March 1935)

ಮೂಲತಃ ಬೆಂಗಳೂರಿನವರಾದ ಟಿ.ಜಿ. ರಾಘವ ಕನ್ನಡದ ಪ್ರಮುಖ ಕಥೆಗಾರರ ಪೈಕಿ ಒಬ್ಬರು. ತಂದೆ ಗೋವಿಂದಾಚಾರ್ (ಆಂಧ್ರದವರು), ತಾಯಿ ತಂಗಮ್ಮ (ತಮಿಳಿನವರು). ಹೀಗಾಗಿ ರಾಘವರ ಮಾತೃಭಾಷೆ ತಮಿಳು. ಆದರೆ, ಕನ್ನಡದಲ್ಲಿ ಕಲಿತು ಕನ್ನಡದ ಪ್ರಮುಖ ಕಥೆಗಾರರಾದರು. ಗುಬ್ಬಿ, ಶ್ರೀನಿವಾಸಪುರ, ಕೋಲಾರದಲ್ಲಿ ಮೆಟ್ರಿಕ್ ವರೆಗೆ ಶಿಕ್ಷಣ ಪೂರೈಸಿದರು.  ಇವರ ಮೊದಲ ಕಥೆ ಟಿಕ್, ಟಿಕ್. ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಇಂಗ್ಲಿಷ್ ಭಾಷೆಯ ‘ವಾರ್ಸಿಟಿ ಟೈಮ್ಸ್’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಕಾಲೇಜಿನ ಸಣ್ಣ ಕಥಾ ಸ್ಪರ್ಧೆಯಲ್ಲಿ ‘ಹಾವು ಹೆಡೆಯಾಡಿತು’ ಬಹುಮಾನ ಗಳಿಸಿತು. ಬಿ.ಎಸ್ಸಿ ನಂತರ ಬೆಂಗಳೂರಿನ ಸೇಯಿಂಟ್ ಅಲೋಷಿಯಸ್ ಹೈಸ್ಕೂಲಿನಲ್ಲಿ ಅಧ್ಯಾಪಕರಾದರು. ನಂತರ ಸಾಗರದ ಲಾಲ್‌ಬಹದ್ದೂರ್ ಕಾಲೇಜಿನಲ್ಲಿ ಟ್ಯೂಟರ್ ಆದರು. ...

READ MORE

Related Books