ತಮ್ಮ ನವಿರಾದ ಹಾಸ್ಯದ ಮೂಲಕ ಗಮನ ಸೆಳೆದಿರುವ ಎಂ.ಡಿ. ಗೋಗೋರಿ ಅವರ ಈ ಕೃತಿಯಲ್ಲಿ ಧನಾತ್ಮಕ ಆಲೋಚನೆಗಳಿರುವ ಬರೆಹಗಳಿವೆ. ತೆಳುವಾದ ಹಾಸ್ಯದ ನೆರವಿನೊಂದಿಗೆ ಒಳ್ಳೆಯದನ್ನು ಆಲೋಚಿಸುವ ಕುರಿತಂತೆ ಗೋಗೇರಿ ಅವರು ಕೃತಿಯಲ್ಲಿ ಚರ್ಚಿಸಿದ್ದಾರೆ.
ಎಂ.ಡಿ. ಗೋಗೇರಿ ಅವರು 1962 ಜೂನ್ 1 ರಂದು ಜನಿಸಿದರು. ಹುಬ್ಬಳ್ಳಿಯಲ್ಲಿ ಟಿ.ಸಿ.ಎಚ್. ತರಬೇತಿ ಪಡೆದು ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಬೊಮ್ಮನ ಹಳ್ಳಿಯಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿದರು. ಇವರ ಕವನ ಹಾಗೂ ಹರಟೆಗಳು ಸಂಯುಕ್ತ ಕರ್ನಾಟಕ, ಕರ್ಮವೀರ,ಕಸ್ತೂರಿ, ಸುಧಾ, ಪ್ರಜಾವಾಣಿ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಕಲಿಸುತ್ತ, ಕಲಿಯುತ್ತ ಬೆಳೆದ ಸಾಹಿತ್ಯದ ಗೀಳು ಇವರದ್ದಾಯಿತು . ವಿದ್ಯಾರ್ಥಿಗಳಿಗೆ ಅಭಿನಯ, ಗೀತೆ, ಪ್ರಹಸನ ತರಬೇತಿಗಳನ್ನು ನೀಡುತ್ತಾ ಬಂದರು. ನಂತರದ ದಿನಗಳಲ್ಲಿ ಕಲಘಟಕಿ ತಾಲ್ಲೂಕಿನ ಮಡಕಿ ಹೊನ್ನಳ್ಳಿಗೆ ಸಹಾಯ ಶಿಕ್ಷಕರಾಗಿ ನೇಮಕರಾದರು. ಕಾವ್ಯಕೃಷಿ ಪ್ರಾರಂಭಿಸಿ ತಮ್ಮ ಮೊಟ್ಟಮೊದಲ ಕವನ ಸಂಕಲನ ಜೀವಜೇನು ...
READ MORE