‘ಸುಖದ ಹಾದಿ’ ಲೇಖಕಿ ಎ.ಪಿ. ಮಾಲತಿ ಅವರ ಪ್ರಬಂಧ ಬರಹಗಳ ಸಂಕಲನ. 1981ರ ಕನ್ನಡ ರಾಜ್ಯೋತ್ಸವದ ಬೆಳ್ಳಿಹಬ್ಬದ ನೆನಪಿನಲ್ಲಿ ಕನ್ನಡ ಸಂಘದ ಹತ್ತನೇ ಕೃತಿಯಾಗಿ ಸುಖದ ಹಾದಿ ಪ್ರಕಟವಾಗಿತ್ತು. ಇದು ಚೈತನ್ಯ ಮಾಲೆಯ ಏಳನೆ ಕೃತಿ. ಲೇಖಕಿ ಎ.ಪಿ. ಮಾಲತಿಯವರ ಕೆಲವು ಚಿಂತನೆಗಳನ್ನು ಒಳಗೊಂಡ ವಿನೂತನ ಕೃತಿ ಇದು. ಈ ಕೃತಿಯಲ್ಲಿ ಜನತೆಯ ಬದುಕನ್ನು ಹಸನಾಗಿಸುವ ಸುಖದ ಸೂತ್ರವನ್ನು ಆತ್ಮೀಯ ಶೈಲಿಯಲ್ಲಿ ಹೆಣೆದಿದ್ದಾರೆ. ಮನುಷ್ಯನ ಬುದ್ಧಿ, ಮನಸ್ಸು, ಶರೀರಗಳಲ್ಲಿ ವ್ಯಾಪಿಸುವ ಸುಖಾಪೇಕ್ಷೆಯ ಮೂಲವನ್ನೂ, ಅದರ ವ್ಯಾಪಕತೆಯನ್ನೂ ವಿವರಿಸಿ, ಸಾಮಾಜಿಕ ಜೀವನದಲ್ಲಿ ಅದನ್ನು ವಿಶ್ಲೇಷಿಸಿದ್ದಲ್ಲದೆ, ಕುಟುಂಬ ಜೀವನದಲ್ಲಿ ಹೇಗೆ ಸುಖಿಯಾಗಿ ಬಾಳಬೇಕೆಂಬುದನ್ನು ಇಲ್ಲಿ ನಿರೂಪಿಸಿದ್ದಾರೆ.
©2024 Book Brahma Private Limited.