ಕಾಡುವ ಮನಸುಗಳು- 50 ಲಲಿತ ಪ್ರಬಂಧ ಬರಹಗಳನ್ನು ಹೊಂದಿರುವ ಕೃತಿ. ನವಿರಾದ ಶೈಲಿ, ಆಧ್ರ ಭಾಷೆಯ ನಿರೂಪಣೆಯಿಂದಾಗಿ ಕೃತಿಯ ಮೌಲ್ಯ ಹೆಚ್ಚಿದೆ. ಹೃದಯದಿಂದ ಬಂದ ಲೇಖಕರ ಮಾತುಗಳು ಓದುಗರ ಹೃದಯವನ್ನು ತಟ್ಟುತ್ತವೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಈ ರೀತಿಯ ಪ್ರಯೋಗಗಳು ತೀರ ವಿರಳ. ಇದೊಂದು ಹೊಸ ಪ್ರಕಾರಕ್ಕೆ ಸೇರಬಹುದಾದ ವಿಶಿಷ್ಟ ಕೃತಿಯಾಗಿದೆ ಎಂದು ಮಲ್ಲಿಕಾರ್ಜುನ ಹುಲಗಬಾಳಿ ಅಭಿಪ್ರಾಯಿಸಿದ್ದಾರೆ. ಮನಸುಗಳಲ್ಲಿ ಕೇವಲ ಮನುಷ್ಯರಷ್ಟೇ ಇಲ್ಲ, ಜೀವರಹಿತ ವಸ್ತುಗಳಲ್ಲೂ ಮನಸುಗಳು ಅಡಗಿರುವುದನ್ನು ಕೃತಿಯಲ್ಲಿ ಕಾಣಿಸಲಾಗಿದೆ. ತೀರ ಸಾಮಾನ್ಯ ವಸ್ತು ಸಂಗತಿಗಳಲ್ಲಿ ಜೀವ ತುಂಬುವ ಹದಗಾರಿಕೆ ಕೃತಿಯಲ್ಲಿ ವ್ಯಕ್ತವಾಗುತ್ತದೆ.
ಮಹೇಶ ಮನ್ನಯ್ಯನವರಮಠ ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ರನ್ನಬೆಳಗಲಿ ಪಟ್ಟಣದವರು. ಕಳೆದ ಮೂರು ದಶಕದಿಂದ ಮಹಾಲಿಂಗಪುರದಲ್ಲಿ ವಾಸವಿದ್ದಾರೆ. ಬಿ.ಕಾಂ ಪದವೀಧರರು. ಧಾರವಾಡ ಹಾಗೂ ವಿಜಯಪುರ ಆಕಾಶವಾಣಿ ಕೇಂದ್ರದಿಂದ ಯುವವಾಣಿಯಲ್ಲಿ ಕಥೆಗಳು ಹಾಗೂ ವರದಿಗಳು ಪ್ರಸಾರವಾಗಿವೆ. ನಾಡಿನ ವಿವಿಧ ಪತ್ರಿಕೆಗಳು ಸೇರಿದಂತೆ ವರದಿಗಾರರಾಗಿ ಕೆಲಸ ಮಾಡಿದ್ದು, ಸದ್ಯ ಪ್ರಜಾವಾಣಿಯ ಮಹಾಲಿಂಗಪುರದ ವರದಿಗಾರರು. ಕೃತಿಗಳು: ನನ್ನ ಕಾವ್ಯ (ಕವನ ಸಂಕಲನ), ಬಾಗಿಲೊಳು ಕೈಮುಗಿದು (ಐತಿಹಾಸಿಕ ದೇವಾಲಯಗಳ ಪರಿಚಯ), ಕಾಡುವ ಮನಸುಗಳು, ಮನಸುಗಳ ಬೆನ್ನತ್ತಿ, ತುಂಬಿದ ಕೊಡಗಳು (ಲಲಿತ ಪ್ರಬಂಧಗಳು) ಪ್ರಶಸ್ತಿ-ಪುರಸ್ಕಾರಗಳು: ‘ನನ್ನ ಕಾವ್ಯ’ ಕವನಸಂಕಲನಕ್ಕೆ ಛಲಗಾರ ಪತ್ರಿಕೆಯಿಂದ ಸಾಹಿತ್ಯ ಶ್ರೀ ...
READ MORE