ಹದಿಹರೆಯದ ಮನಸ್ಥಿತಿಯ ವಿಶ್ಲೇಷಣೆ ಚಂದ್ರಶೇಖರ ಆಲೂರು ಅವರ ಕೇಂದ್ರ ಆಸಕ್ತಿ ಎನ್ನಬಹುದು. ಪ್ರಬಂಧದ ವಿಷಯ ಏನೇ ಆಗಿದ್ದರೂ - ಪ್ರೇಮ, ಪ್ರೀತಿ, ಮನುಷ್ಯ ಸಂಬಂಧಗಳು, ಏಕಾಕಿತನ, ಸಾವು, ಕ್ರಿಕೆಟ್, ಸಂಶಯ - ಅದಕ್ಕೆ ತರುಣ ಮನಸ್ಸುಗಳ ಪರವಾಗಿ ಎಂಬಂತೆ ಲೇಖಕರು ಪ್ರತಿಕ್ರಿಯಿಸುತ್ತಾರೆ. ಹೀಗಾಗಿ ಇಲ್ಲಿನ ಎಲ್ಲ ಪ್ರಬಂಧಗಳಲ್ಲಿ ಕೆಲಸ ಮಾಡುವ ಮನಸ್ಸು ಒಂದೇ ಎನಿಸುತ್ತದೆ.
ಇದರಿಂದಾಗಿ ಒಂದು ಬಗೆ ಆಪ್ತತೆ, ಸಮಗ್ರತೆಗಳು ಸಂಕಲನಕ್ಕೆ ಲಭ್ಯವಾಗಿವೆ. ಈ ಪ್ರಬಂಧಗಳು ಲೇಖಕರ ವಿವಿಧ ಭಾವಸ್ಥಿತಿಗಳ ದಾಖಲೆಗಳಾಗಿದ್ದರೂ ಒಟ್ಟಿಗೇ ಗಮನಿಸಿದಾಗ ಒಂದು ಬಗೆಯ ನಿರಂತರತೆಯನ್ನು ಕಾಣಬಹುದು. ಅಂದರೆ, ಈ ಪ್ರಬಂಧಗಳು ಆಯಾ ಕ್ಷಣಗಳ ದಾಖಲೆಯಾಗಿದ್ದರೂ ಅವು ಬಿಡಿಬಿಡಿ ಎನ್ನಿಸದೆ ಲೇಖಕನೊಬ್ಬನ ಗಂಭೀರ ಕಾಳಜಿಗಳ ಮುಂದುವರೆದ ಮಂಡನೆಯೆಂದೇ ತೋರುತ್ತವೆ.
ಈ ಪ್ರಬಂಧಗಳು ಸೃಜನಶೀಲ ಮನಸ್ಸಿನ ಸೃಷ್ಟಿಗಳು. ಹಾಗಾಗಿ ಪ್ರಬಂಧದ ವಸ್ತು ವಿಷಯಗಳು ಸಿದ್ದಪಡಿಸಿದ ಸಾಮಗ್ರಿಗಳ ಹಾಗೆ ಬಳಕೆಯಾಗದೆ ಅವುಗಳೊಂದಿಗೆ ಹೆಣಗಾಡಿದ ಸೃಜನಶೀಲ ಪ್ರಯತ್ನದ ಫಲಗಳಿಗಾಗಿ ಮೂಡಿಬರುತ್ತವೆ.
©2024 Book Brahma Private Limited.