ಲೇಖಕಿ ಸುಮಾವೀಣಾ ಅವರ ಪ್ರಬಂಧಗಳ ಸಂಕಲನ-ಮನಸ್ಸು ಕನ್ನಡಿ. ಕೊರೊನಾ ಸಂದರ್ಭದಲ್ಲಿ ಬರೆದ ಪ್ರಬಂಧಗಳ ಜೊತೆ ಈ ಹಿಂದಿನ ಪ್ರಬಂಧಗಳು ಸೇರಿಸಿ ಒಟ್ಟು 21 ಪ್ರಬಂಧಗಳನ್ನು ಸಂಕಲಿಸಲಾಗಿದೆ. ಸಾಹಿತಿ ಮಲ್ಲೇಪುರಂ ಜಿ. ವೆಂಕಟೇಶ ಅವರು ಕೃತಿಯ ಕುರಿತು ‘ ಪ್ರಬಂಧಗಳ ಭಾಷೆ, ನಿರೂಪಣೆ, ಸಂವಹನ ಓದುಗರನ್ನು ಸೆರೆ ಹಿಡಿದು ನಿಲ್ಲಿಸುತ್ತವೆ. ಕೊಡೆಯನ್ನು ಕುರಿತ ಪ್ರಬಂಧವಂತೂ ಅಪೂರ್ವವಾಗಿದೆ. ಇವರ ಸೂಕ್ಷ್ಮ ಸಂವೇದನೆಯ ಬರಹಗಳು ಇಲ್ಲಿ ಗಮನ ಸೆಳೆಯುತ್ತವೆ. ಲೇಖಕಿಯ ಬಹುವ್ಯಾಪ್ತಿಯುಳ್ಳ ಓದಿನ ವಿವಿಧ ಬಗೆಗಳು ಲೋಕಸಂಚಯದ ವಿವಿಧ ರಿವಾಜುಗಳು ಮಾಹಿತಿ ಲೋಕದ ನೂತನ ಸಂಗತಿಗಳು ಇಲ್ಲಿ ಓರಣವಾಗಿ ಅಕ್ಷರ ರೂಪ ಪಡೆದುಕೊಂಡಿವೆ’ ಎಂದು ಶ್ಲಾಘಿಸಿದ್ದಾರೆ.
ಈ ಕೃತಿಯಲ್ಲಿನ 21 ಶೀರ್ಷಿಕೆಗಳು ಹೀಗಿವೆ; ಅಜ್ಜಿಯ ರೈಲು ಚೆಂಬು, ನಾನು ಉಪನೇತ್ರೆಯಾದೆ, ಕಂಬನಿ ತರಿಸಿದ ಲಾಕ್‌ಡೌನ್ ಚಂದ್ರಮತಿ, ಚಲನಚಿತ್ರದಲ್ಲಿ ನಿತ್ಯನೂತನವಾಗಿರುವ ಭಾವಗೀತೆ, ನವರಸಗಳು, ಹಾರ್ಮೋನುಗಳು, ಸಂಗೀತದ ರಾಗಗಳ ಹಿನ್ನೆಲೆಯಲ್ಲಿ, ಮೊದಲಬಾರಿ ಪೇಯಿಂಗ್‌ಗೆಸ್ಟ್ ಆಗಿ ಹೋದಾಗ, ಡೆಡ್ಲಿ ವೈರಸ್ ನೆನಪಿಸಿದ ಇಡ್ಲಿ, ನಾವು ಕಾಫಿ ಮಂದಿ, ಸೀ ಸಮುದಾಯದ ಪರವಾಗಿ ಮೊದಲು ಮೌನ ಮುರಿದ “ಮಾಧವಿ", ಫೈಟ್ ತಪ್ಪಿಸಿದ ಮೆಹೆಂದಿ, ರಜಾ ಮಜಾ! ರಜಾ ಸಜಾ, “ಹಾವು?” ಅಂದರೆ ಧಿಗಿಲೇನೆ?, ಉಪ್ಪಿಟ್ಟೂ ಐ ಲೈಕ್ ಯು ಟೂ.., 'ಮರಳಿಮಣ್ಣಿಗೆ' ರಾಮನನ್ನು ನೆನಪಿಸಿದ ಕೊರೋನಾ ಕಾಲಾಳುಗಳು, ಹತ್ತಿರವಿದ್ದೂ ದೂರ ನಿಲ್ಲುವೆವು, ವಿದ್ಯಾರ್ಥಿಗಳಲ್ಲಿ ಕುಂದುತ್ತಿರುವ ಬರವಣಿಗೆಯ ಸಾಮರ್ಥ್ಯ, ಆಟಿ ಪದಿನಟ್ಟು ಕೊಡವರ ಜಾನಪದ ಆಚರಣೆ, ಮನಸ್ಸು ಕನ್ನಡಿ, ಅನುರೂಪ ವಸ್ತುಗಳ ಸಂಚಯನ ಎಲೆ ಅಡಿಕೆ ಚೀಲ, ಹೋಗಿ ಬರುತ್ತೇವೆ ಆ ಬೆಟ್ಟಕ್ಕೆ, ಕೊಡೆಯರಳಿ ಹೂವಾಗಿಗಳನ್ನು ಒಳಗೊಂಡಿದೆ.
ಪ್ರಬಂಧಗಾರ್ತಿ ಸುಮಾ ವೀಣಾ ಅವರು ಉಪನ್ಯಾಸಕಿ. ತಂದೆ ಪುಟ್ಟರಾಜು, ತಾಯಿ ಲಲಿತಾ. ಹಾಸನದ ಹೇಮಗಂಗೋತ್ರಿಯಲ್ಲಿ ಕನ್ನಡ ಎಂ. ಎ ಅಧ್ಯಯನ. ವಿದ್ಯಾರ್ಥಿ ದಿಸೆಯಿಂದಲೇ ರಾಜ್ಯ ಮತ್ತು ರಾಷ್ಟ್ರಿಯ ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದಾರೆ. ಅವರ ಬರೆಹಗಳು ವಿಜಯವಾಣಿ, ಸುಧಾ ವಾರ ಪತ್ರಿಕೆಯಲ್ಲಿ ಪ್ರಕಟವಾಗಿವೆ. ವಚನ ಸಾಹಿತ್ಯ ಕುರಿತು ವಿಶೇಷ ಉಪನ್ಯಾಸಗಳನ್ನು ನೀಡಿದ್ದಾರೆ. ಕೃತಿಗಳು: ನಲಿವಿನ ನಾಲಗೆ (ಪ್ರಬಂಧಗಳ ಸಂಕಲನ), ಶೂರ್ಪನಖಿ ಅಲ್ಲ ಚಂದ್ರ ನಖಿ (ಕವನ ಸಂಕಲನ), ಮನಸ್ಸು ಕನ್ನಡಿ (ಪ್ರಬಂಧಗಳ ಸಂಕಲನ). ...
READ MORE