'ಬಣ್ಣವೊರೆಸುವ ಎಣ್ಣೆಗನ್ನಡಿ' ಹನ್ನೊಂದು ಲಲಿತ ಪ್ರಬಂಧಗಳನ್ನು ಒಳಗೊಂಡ ಕೃತಿ. ತಾವು ಕಂಡ ಪ್ರಸಂಗಗಳನ್ನೇ ಲೇಖನಿ ಮೂಲಕ ಹುರಿಗೊಳಿಸಿ ಓದುಗರಿಗೆ ನೀಡಿದ್ದಾರೆ ಪ್ರಜ್ಞಾ ಮತ್ತಿಹಳ್ಳಿ. ನಾಟಕ ಮತ್ತು ಬದುಕು ಒಂದೇ ನಾಣ್ಯದ ಎರಡು ಮುಖಗಳು ಎನ್ನುವುದನ್ನು ಅಲ್ಲಿ ಬಣ್ಣಕಳಚುವ ಪಾತ್ರಗಳೇ ಹೇಳಿಬಿಡುವುದರಿಂದ ಕೃತಿ ವಿಶಿಷ್ಟ ಎನಿಸುತ್ತದೆ.
ಲೇಖಕಿ ರೇಣುಕಾ ರಮಾನಂದ್ ಕೃತಿಯ ಕುರಿತು ಸಾಮಾಜಿಕ ಜಾಲತಾಣವೊಂದರಲ್ಲಿ ಚರ್ಚಿಸಿರುವುದು ಹೀಗೆ: ’ನೆನಪಿನ ರಂಗಸ್ಥಳದಲ್ಲಿ ಆಟ ಕುಣಿದು ಹೋದ ಮೇಲೆ ಬಿದ್ದ ಒಂದೊಂದೇ ಮಣಿಮುತ್ತುಗಳನ್ನು ಬಣ್ಣದ ಜರಿಗಳನ್ನು ಹೆಕ್ಕಿ ಒಂದು ಸರ ಪೋಣಿಸಿದಂತೆ ಪ್ರಜ್ಞಾ ಅವರು ಮನಸಿಗಿಷ್ಟವಾಗುವ ನುಡಿಚಿತ್ರಗಳನ್ನು ಪೋಣಿಸಿ ನಮ್ಮೆದುರಿಗಿಟ್ಟಿದ್ದಾರೆ. ಹಲವು ಬಣ್ಣಗಳ ಸೈಜುಗಳ ಹಾರ ಇದು... ಬಲು ಇಷ್ಟವಾಯ್ತು ನನಗೆ’
ಲೇಖಕಿ ಪ್ರಜ್ಞಾ ಮತ್ತಿಹಳ್ಳಿ ಅವರು ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರು. 1969ರ ಏಪ್ರಿಲ್ 02ರಂದು ಜನಿಸಿದ ಅವರು ವಾಣಿಜ್ಯಶಾಸ್ತ್ರದಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ. ಪ್ರಜ್ಞಾ ಮತ್ತಿಹಳ್ಳಿ ಅವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸೃಜನಶೀಲ ಪ್ರಯೋಗ ಮಾಡುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಥೆ, ಕಾವ್ಯದ ಜೊತೆಗೆ ಹಾಸ್ಯ ಲೇಖನಗಳನ್ನು ಬರೆದಿರುವ ಅವರಿಗೆ ನಾಟಕ ರಚನೆ ಕೂಡ ಆಸಕ್ತಿಯ ಕ್ಷೇತ್ರ. ಅವರ ಕಥೆಗಳು ಮತ್ತು ಕವನಗಳು ನಾಡಿನ ವಿವಿಧ ಪತ್ರಿಕೆಗಳ ವಿಶೇಷಾಂಕಗಳ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿವೆ. ನುರಿತ ಯಕ್ಷಗಾನ ಕಲಾವಿದೆಯೂ ಆಗಿರುವ ಅವರು ಅದಕ್ಕಾಗಿ ಶಾಸ್ತ್ರೀಯ ತರಬೇತಿ ಪಡೆದಿದ್ದಾರೆ. ಅವರ ಪ್ರಕಟಿತ ...
READ MOREಲಲಿತ ಪ್ರಬಂಧ-2017