ಮಿಂಚಿನ ಬೆಳಕು

Author : ಅಂತಃಕರಣ

Pages 124

₹ 100.00




Year of Publication: 2014
Published by: ಬೆನಕ ಬುಕ್ಸ್ ಬ್ಯಾಂಕ್
Address: ಯಳಗಲ್ಲು, ಕೋಡೂರು- ಅಂಚೆ, ಹೊಸನಗರ ತಾಲೂಕು, ಶಿವಮೊಗ್ಗ ಜಿಲ್ಲೆ-577418
Phone: 8861065161

Synopsys

‘ಮಿಂಚಿನ ಬೆಳಕು’ ವಿದ್ಯಾಸಾಗರ ಬಾಲ ಪುರಸ್ಕಾರ ವಿಜೇತ ಕಿಶೋರ ಸಾಹಿತಿ ಅಂತಃಕರಣನ ಅಂಕಣ ಪ್ರಬಂಧಗಳ ಸಂಕಲನವಾಗಿದೆ. ಇಲ್ಲಿನ ಬರಹಗಳಲ್ಲಿ ಅಂತಃಕರಣನಿಗೆ ದಕ್ಕಿದ ಅನುಭವಗಳ ವಿವರಗಳಿವೆ. ಆಪ್ತವಾದ ವಿಚಾರಗಳಿವೆ, ಇಷ್ಟವಾದ ಸಂಗತಿಗಳ ಪ್ರತಿಪಾದನೆಯಿದೆ, ವಸ್ತು-ವ್ಯಕ್ತಿ, ವಿಶ್ಲೇಷಣೆಯಲ್ಲಿ ಸಮಷ್ಟಿ ಪ್ರಜ್ಞೆಯಿದೆ. ಐತಿಹಾಸಿಕ, ಸಾಮಾಜಿಕ, ಸಾಹಿತ್ಯಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಾಂಸ್ಕೃತಿಕ ನೆಲೆಗಳ ಅಸ್ಮಿತೆಯ ಕುರುಹುಗಳಿವೆ. 

ಗಂಭೀರವೂ, ವಿನೋದವೂ ಆಗಿರುವ ಪ್ರಸಂಗಗಳ ಚಿತ್ರಣವಿದೆ. ಅಂತಃಕರಣನ ಬಾಲ್ಯದ ಕ್ಷಣಗಳ ಆಡಂಬೋಲದಲ್ಲಿ ವಿಶಿಷ್ಟವೆನಿಸಿದ್ದೆಲ್ಲ ಹಸಿರಾಗಿ, ಉಸಿರಾಗಿ ಕಂಗೊಳಿಸಿದೆ. ಇದನ್ನೆಲ್ಲಾ ಅಕ್ಷರಗಳಲ್ಲಿ ದಾಖಲಿಸಿದ ಅವರ ಚೇತೋಹಾರಿಕೆ ಅಭಿನಂದನಾರ್ಹವಾಗಿದೆ ಎನ್ನುತ್ತಾರೆ ಸಾಹಿತಿಗಳಾದ ಅಬ್ಬಾಸ್ ಮೇಲಿನಮನಿ. ಇಲ್ಲಿನ ಬರಹಗಳಲ್ಲಿ ವಸ್ತು ವೈವಿಧ್ಯತೆಯಿದೆ. ಸರಳತೆಯಿದೆ, ಲಾಲಿತ್ವಿದೆ, ಚಿಕ್ಕಚಿಕ್ಕ ವಾಕ್ಯಗಳ ಪುಳಕಗೊಳಿಸುವ ಶೀರ್ಷಿಕೆಗಳ ತಾಜಾತನವಿದೆ. ಮಕ್ಕಳಿಗಂತೂ ಸರಿ, ದೊಡ್ಡವರಿಗೂ ಇಷ್ಟವಾಗುವಂತಿವೆ. ಒಮ್ಮೊಮ್ಮೆ ಬರಹಗಳ ಸ್ತರದ ಗಾಂಭೀರ್ಯತೆ, ಅಂತಃಕರಣನ ವಯಸ್ಸಿಗೆ ಮೀರಿದ್ದು ಅನಿಸಿ, ಹೆತ್ತವರ ಸಂಸ್ಕಾರದ ಫಲವಂತಿಕೆಯ ಪರಿಣಾಮದ್ದೆನಿಸಿ ಅಭಿಮಾನ ಮೂಡುತ್ತದೆ ಎನ್ನುತ್ತಾರೆ.

About the Author

ಅಂತಃಕರಣ

ಅಂತಃಕರಣ  ತನ್ನ 4ನೇ ಕ್ಲಾಸಿನಿಂದ 'ಎಚ್ಚರಿಕೆ', 'ಜೀವನ್ಮುಖಿ' ಪತ್ರಿಕೆಗಳಲ್ಲಿ ಮತ್ತು ಅಂತರ್ಜಾಲ  ಪತ್ರಿಕೆ 'ವಿಶ್ವಕನ್ನಡಿಗ'ದಲ್ಲಿ  ವಾರಕ್ಕೆ 2 ಅಂಕಣ ಬರೆಯುತ್ತಿರುವ ಅಂಕಣಕಾರ. ಇದುವರೆಗೆ ಕ್ರೀಡಾಂಕಣಗಳೂ ಸೇರಿದಂತೆ 500 ಅಂಕಣಪ್ರಬಂಧ, 95 ಕವಿತೆ, 78 ಕತೆ, 4 ಕಾದಂಬರಿ ಮತ್ತು 1 ನಾಟಕಗಳನ್ನು ರಚಿಸಿರುವ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಬರೆಯುವ ಲೇಖಕ. 9ನೇ ತರಗತಿಯೊಳಗೆ 4 ಸಮಗ್ರ ಬರಹಗಳ ಕೃತಿಗಳು ಸೇರಿದಂತೆ ಒಟ್ಟು 30 ಕೃತಿಗಳನ್ನು ರಚಿಸಿರುವ ಪುಟ್ಟ ಸಾಹಿತಿ. ಪ್ರಸ್ತುತ ಶಿವಮೊಗ್ಗದ ಲೊಯಲಾ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ. ಕನ್ನಡ ಪ್ರವೇಶ, ಕಾವ ಸಾಹಿತ್ಯ ಪರೀಕ್ಷೆಗಳಲ್ಲಿ ಮತ್ತು ...

READ MORE

Related Books