ಲೇಖಕ ಗುರುಪ್ರಸಾದ ಕಾಗಿನೆಲೆಯವರ ಪ್ರಬಂಧ ಸಂಕಲನ ಕೃತಿ’ ಸಾವೆಂಬ ಲಹರಿ’.
ವೃತ್ತಿಯಿಂದ ವೈದ್ಯರಾದ ಲೇಖಕರು ತಮ್ಮ ವೈದ್ಯ ವೃತ್ತಿಯಲ್ಲಿ ಕಂಡ ರೋಗಿಗಳ ನಡುವಿನ ಒಡನಾಟದ ವಿಶಿಷ್ಟಾನುಭವಗಳ ಕಥನಗಳನ್ನು ಈ ಕೃತಿಯಲ್ಲಿ ಸಂಕಲಿಸಿದ್ದಾರೆ.
ಬೇರೆ ಬೇರೆ ದೇಶದ ಮತ್ತು ಸಮಾಜದೊಳಗಿನ ರೋಗಿಗಳ ಜೊತೆಗಿನ ಅನುಭವಗಳ ಕಥನವೇ ಇಲ್ಲಿ ಹೆಚ್ಚು ಸ್ವಾರಸ್ಯಕರವಾಗಿದೆ. ಮನುಷ್ಯ ಸ್ವಭಾವದ ವಿಲಕ್ಷಣತೆ ಮತ್ತು ತಾತ್ವಿಕ ದೃಷ್ಟಿಕೋನಗಳ ವಿನೋದ ಭರಿತ ಬರಹಗಳು ಇಲ್ಲಿ ಮುಖ್ಯವಾಗಿದೆ. ರೋಗಿಗಳ ಮತ್ತು ರೋಗಿ ಬಂಧುಗಳ ವರ್ತನೆಗಳ ಹಿಂದೆ ಕೇವಲ ದೇಹ ಮತ್ತು ಮನಸ್ಸುಗಳ ಮಾತ್ರವಲ್ಲದೆ ಅವರ ಸಮಾಜ, ಅವರ ಆಲೋಚನ ಕ್ರಮ, ಸಂಸ್ಕೃತಿ, ನಾಗರೀಕತೆಗಳೆಲ್ಲವನ್ನೂ ಇಲ್ಲಿ ಸೂಕ್ಷ್ಮವಾಗಿ ಗ್ರಹಿಸಲಾಗಿದೆ. ಲೇಖಕರು ವಿದೇಶದಲ್ಲಿ ನೆಲೆಸಿದ ಪರಿಣಾಮವಾಗಿ ಅಮೆರಿಕ ಮೂಲಕ ಭಾರತವನ್ನು, ಭಾರತದ ಮೂಲಕ ಅಮೆರಿಕವನ್ನು ಇಲ್ಲಿ ಮುಖಾಮುಖಿಗೊಳಿಸುತ್ತಾ ತಮ್ಮ ಸಮುದಾಯದ, ಸಮಾಜದ, ನಾಗರಿಕತೆಗಳ ಚೌಕಟ್ಟನ್ನು ಓದುಗರಿಗೆ ತಮ್ಮ ಗ್ರಹಿಕೆ, ಅನುಭವಗಳ ಮೂಲಕ ಈ ಕೃತಿಯಲ್ಲಿ ಪರಿಚಯಿಸಿದ್ದಾರೆ.
’ಜಾಗತಿಕ ಎನ್ನಬಹುದಾದ ಅನುಭವಲೋಕವನ್ನು ಹುಟ್ಟಿ ಬೆಳೆದ ಸ್ಥಳೀಯ ಸಮಾಜದ ಅನುಭವಗಳೊಂದಿಗೆ ಬೆರೆಸಿ ಮತ್ತು ತೂಗಿ ನೋಡುವ ಇಲ್ಲಿನ ನೋಟಕ್ರಮವು ಇದಕ್ಕೆ ಇಂಬಾಗಿದೆ’ – ರಹಮತ್ ತರೀಕೆರೆ
©2024 Book Brahma Private Limited.