`ಶಕ್ತಿಶಾಲಿ ವ್ಯಕ್ತಿತ್ವದ ನಿರ್ಮಾಣ’ ಕೃತಿಯು ದೀಪಕ್ ಬಿಳ್ಳೂರ ಅವರ ಪ್ರಬಂಧ ಸಂಕಲನವಾಗಿದ್ದು, ಲೇಖಕರು ಸಹಜೀವಿಗಳ ಕುರಿತು ಹೊಂದಿದ ಕಾಳಜಿ ಈ ಪುಸ್ತಕದಲ್ಲಿ ವ್ಯಕ್ತವಾಗಿದೆ. ವ್ಯಕ್ತಿತ್ವದಿಂದ ವಿಕಾಸದ ಮೆಟ್ಟಿಲು ಏರಲು ಉಪನಿಷದ್‌ಕಾರರ ಮಾರ್ಗ ವಿವರಿಸಿದ್ದಾರೆ. ಅಂತೆಯೇ ಬಾಹ್ಯ-ಜೀವನದಲ್ಲಿ ಯಶಸ್ಸು ಕಾಣಲು ಹಲವು ಸಂಗತಿಗಳನ್ನು ಈ ಪುಸ್ತಕದಲ್ಲಿ ನಿರೂಪಿಸಿದ್ದಾರೆ. ಈ ಕಿರುಪುಸ್ತಕದ ಓದಿನಿಂದ ಬಹಳ ಪುಸ್ತಕಗಳನ್ನು ಓದಿದ ಅನುಭವವಾಗುತ್ತದೆ. ಸಜ್ಜನತೆ, ಸುಶೀಲತೆ, ಕರ್ತವ್ಯಪರತೆ, ರಾಷ್ಟ್ರನಿಷ್ಠೆ, ಆತ್ಮಾಭಿಮುಖತೆ ವರ್ಧಿಸಲು ಈ ಪುಸ್ತಕ ಪ್ರೇರಿಸುತ್ತದೆ. ಶಕ್ತಿ ಇಲ್ಲದ ವ್ಯಕ್ತಿ ಖಾಲಿ ಕೊಡದಂತೆ, ಜೀವನದುದ್ದಕ್ಕೂ ಶಕ್ತಿ ಸಂಗ್ರಹ ಕಾರ್ಯ ನಡೆದೇ ಇರಬೇಕು. ಆಗ ಸಾರ್ಥಕತೆ ಎಂಬ ಕೊಡ ತುಂಬುವುದು. ಸರ್ವತೋನ್ಮುಖ ಪ್ರಗತಿಯೇ ಶಕ್ತಿಶಾಲಿ ವ್ಯಕ್ತಿತ್ವದ ಮಾನದಂಡ. ಈ ನಿಟ್ಟಿನಲ್ಲಿ ಸಮರ್ಥ ವಸ್ತು ವಿಷಯವನ್ನು ಈ ಪುಸ್ತಕ ನೀಡುತ್ತದೆ.
©2025 Book Brahma Private Limited.