ಲೇಖಕ ಎಸ್. ದಿವಾಕರ ಅವರ ಲೇಖನ-ಪ್ರಬಂಧಗಳ ಸಂಕಲನ-‘ಕೃಷ್ಣಲೀಲೆಯಿಂದ ರಾಮರಾಜ್ಯಕ್ಕೆ. ‘ಪದಾರ್ಥಕೋಶಕ್ಕೆ ಪರಮಾಧಿಕಾರವುಂಟೆ?' ಪ್ರಸಿದ್ಧ ಪುರುಷರ ಸುತ್ತಮುತ್ತ, ಹುಲಿರಾಯ, ಕೃಷ್ಣಲೀಲೆಯಿಂದ ರಾಮರಾಜ್ಯಕ್ಕೆ, ಸಾಭಿನಯ ಸಂಗೀತ, ಕಥಾ ಸಾಹಿತ್ಯದ ಕ್ರಿಯಾಕ್ಷೇತ್ರ, ರಾಜಾಜಿ ಬರೆದ ಕತೆ, ಅನಕೊಂಡ ಎಷ್ಟು ಉದ್ದ?, ‘ಮಾನ್ಹಟನ್ ಟ್ರಾನ್ಸ್‌ಫರ್’, ಭೀಮಸೇನರ ಸಂಗೀತ ಸೌಗಂಧಿಕಾ, ಗಾಂಧೀಜಿಯ ಗಡಿಯಾರ ಮತ್ತು ಪೆನ್ನು, ಹೊಟೆಂಟಾಸ್ ವೀನಸ್, ದೈನಿಕ ವಾಸ್ತವಗಳ ದಟ್ಟ ಪ್ರತಿಫಲನ, ಮಂಗಳಂಪಲ್ಲಿ ಬಾಲಮುರಳೀ ಕೃಷ್ಣ, ಅಂತರಗಂಗೆ ಮತ್ತು ಫೆಯ್‌ಟಾನ್, ಹೆಣ ಚಂದಮಾಡಿದರೂ ಹೆಣವೇ, ಸುಗಮ ಸಂಗೀತ, ಪ್ರೀತಿಗೊಂದು ರೂಪಕ’ - ಪ್ರಬಂಧಗಳನ್ನು ‘ಕೃಷ್ಣಲೀಲೆಯಿಂದ ರಾಮರಾಜ್ಯಕ್ಕೆ’ ಕೃತಿ ಒಳಗೊಂಡಿದೆ.
ಕೃತಿಗೆ ಬೆನ್ನುಡಿ ಬರೆದಿರುವ ಪತ್ರಕರ್ತ ಚ. ಹ. ರಘುನಾಥ “ಈ ಕೃತಿಯ ಪ್ರಬಂಧಗಳು ವಿಶೇಷವೆನ್ನಿಸಲು ಮೇಲ್ನೋಟಕ್ಕೆ ಎದ್ದು ಕಾಣುವ ಕಾರಣಗಳು ಮೂರು, ಸಣ್ಣಕಥೆಯೊಂದರ ಕಸುವು ಹಾಗೂ ಕವಿತೆಯ ಬಿಗಿ ಇರುವುದು ಮೊದಲ ಕಾರಣ. ಇಲ್ಲಿನ ಪ್ರಬಂಧಗಳಲ್ಲಿ ಮಾಹಿತಿಯಿದೆ, ಸ್ವಾರಸ್ಯವೂ ಇದೆ; ಇವೆಲ್ಲವನ್ನೂ ಮಾಗಿದ ಮನಸ್ಸಿನ ಚಿಂತನೆಯ ವಿವೇಕವೊಂದು ಕಲಾತ್ಮಕವಾಗಿ ಒಟ್ಟುಮಾಡಿದೆ ಎನ್ನುವುದು ಎರಡನೆಯ ವಿಶೇಷ, ಪ್ರಬಂಧಗಳಲ್ಲಿ ಸ್ಪಷ್ಟವಾಗಿ ಕಾಣಿಸುವ ಪ್ರಬಂಧಕಾರರ ಓದಿನ ವಿಸ್ತಾರ, ಭಾಷೆಯ ಬಗೆಗಿನ ಎಚ್ಚರದ ಪ್ರೀತಿ ಹಾಗೂ ಪ್ರಯೋಗಶೀಲತೆಯ ಹಂಬಲ ಮೂರನೆಯ ವಿಶೇಷ. ಪ್ರಬಂಧ ಪ್ರಕಾರ ಬರಹಗಾರನಿಗೆ ವಿಚಿತ್ರವಾದ ಸ್ವಾತಂತ್ರವನ್ನು ಒದಗಿಸುತ್ತದೆ. ಈ ಸ್ವಾತಂತ್ರವನ್ನು ಬಳಸಿಕೊಂಡೂ, ಯಾವ ಸಂದರ್ಭದಲ್ಲೂ ತಮ್ಮ ಪ್ರಬಂಧ ಹರಟೆಯ ಜಾಡಿಗೆ ಹೊರಳದಂತೆ ದಿವಾಕರ್ ಎಚ್ಚರವಹಿಸಿದಂತಿದೆ. ತಮ್ಮ ಪ್ರಬಂಧಗಳಲ್ಲಿ ಅವರು ಸಾಧಿಸಿರುವ ಭಾಷಾ ಸಂಯಮ ಕುತೂಹಲಕರ. ಕಥೆ ಅಥವಾ ಕವಿತೆಯಲ್ಲಿ ಕಾಣುವ ಭಾಷೆಯ ಬಿಗಿ, ಕುಸುರಿಕಲೆ ಹಾಗೂ ಶಿಲ್ಪ ಇವು ದಿವಾಕರರ ಪ್ರಬಂಧಗಳಲ್ಲೂ ಇವೆ. ಕನ್ನಡದ ಉತ್ತಮ ಪ್ರಬಂಧಗಳ ಸಾಲಿಗೆ ಸೇರುವ ಇಲ್ಲಿನ ರಚನೆಗಳು ದಿವಾಕರ ಅವರ ಪ್ರತಿಭಾ ವಿಲಾಸದ ಒಂದು ಹಿಡಿಯಷ್ಟೇ ಎಂದು ನನಗೆ ಮತ್ತೆ ಮತ್ತೆ ಅನ್ನಿಸಿದೆ” ಕೃತಿ ಕುರಿತು ವಿಶ್ಲೇಷಿಸಿದ್ದಾರೆ.
©2024 Book Brahma Private Limited.