ಡಾ. ರತ್ನಾಕರ ಸಿ. ಕುನುಗೋಡು ಅವರು ಪಿಹೆಚ್ ಡಿ ಪದವಿಗಾಗಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಸಂಶೋಧನಾ ಮಹಾಪ್ರಬಂಧ ‘ಬೇರು ಬಿಳಲು’ ಸಾಂಸ್ಕೃತಿಕ ಚರಿತ್ರೆಯ ಮರುರಚನಾ ನೆಲೆಗಳು. ಈ ಕೃತಿಗೆ ಡಾ. ರಾಮಚಂದ್ರಪ್ಪ ಎ.ಬಿ., ಡಾ.ಕಾ.ವೆಂ. ಶ್ರೀನಿವಾಸಮೂರ್ತಿ, ಡಾ. ಸಬಿತಾ ಬನ್ನಾಡಿ ಅವರ ಬೆನ್ನುಡಿಯ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ 'ಪುರಾಣ, ಚರಿತ್ರೆ ಮತ್ತು ಜಾನಪದಗಳು ಆಧುನಿಕ ಕನ್ನಡ ನಾಟಕಗಳ ವಿಷಯಗಳಾಗಿ ಹೆಚ್ಚು ಒತ್ತಾಸೆಯನ್ನು ಪಡೆದಿರುವುದು ಮೇಲ್ನೋಟಕ್ಕೆ ಕಾಣಿಸುವ ಸಂಗತಿಯಾಗಿದೆ ಎನ್ನುತ್ತಾರೆ' ಡಾ. ಸಬಿತಾ ಬನ್ನಾಡಿ. ಜೊತೆಗೆ 'ಈ ಅಧ್ಯಯನವು ಈ ಅಂಶಗಳನ್ನು ಸಾಂಸ್ಕೃತಿಕ ಚರಿತ್ರೆಯನ್ನಾಗಿ ಗುರುತಿಸುವುದು ವಿಶೇಷವಾಗಿದೆ. ರಾಜ, ಮತ, ಗಂಡು, ಅಭಿವೃದ್ಧಿ ಮೊದಲಾದ ಯಾಜಮಾನ್ಯ ನೆಲೆಗಳು ಹೇಗೆ ನಮ್ಮೆಲ್ಲಾ ಚಿಂತನೆಗಳನ್ನು ಆಕ್ರಮಿಸಿಕೊಂಡಿರುತ್ತವೆ ಎಂಬುದನ್ನು ತೆರೆದು ತೋರುವಲ್ಲಿ ಈ ಅಧ್ಯಯನವು ಯಶಸ್ವಿಯಾಗಿದೆ' ಎಂದು ಮೆಚ್ಚುಗೆ ಸೂಚಿಸಿದ್ದಾರೆ.
©2024 Book Brahma Private Limited.