‘ಬೇಂದ್ರೆಕಾವ್ಯ: ಅವಧೂತಪ್ರಜ್ಞೆ’ ಗೀತಾವಸಂತ ಅವರು ರಚಿಸಿರುವ ಪ್ರಬಂಧ ಸಂಕಲನ. ಅಂಬಿಕಾತನಯದತ್ತ ಬೇಂದ್ರೆಯವರು ಅನುಭವಿಸಿದ ಅವಧೂತತನವು ಅವರ ಕಾವ್ಯಾತ್ಮಕ ಪ್ರಜ್ಞೆಯ ಫಲಿತಾಂಶವಾಗಿದೆ. ಅನುಭಾವದೆತ್ತರಕ್ಕೆ ಕಲ್ಪನೆಯ ನಂಟನಿಂದ ಏರುವ ಬೇಂದ್ರೆ ಇಹದ ನೆಂಟನ್ನು ಬಿಡುವುದಿಲ್ಲ. ಕಟ್ಟಿಕೊಂಡ ಲೋಕದ ಗಂಟನ್ನು ಸಡಿಲಗೊಳಿಸುವುದಿಲ್ಲ. ಓದುಗನಿಗೆ ಶಾಂತಿರಸವನ್ನು ಪ್ರೀತಿಯಿಂದ ಮೈದೋರಿಸುವ ಗಾರುಡಿಗತನ ಬೇಂದ್ರೆಯವರದು. ಬೇಂದ್ರೆ ಕಾವ್ಯದ ಅವಧೂತ ಪ್ರಜ್ಞೆ ತನ್ನ ವೈಚಾರಿಕ ಸ್ವರಮಂಡಲದ ನಾಲ್ಕು ತಂತಿಗಳನ್ನು ಮೀಟುವ ಮೂಲಕ ಸುಲಲಿತವಾಗಿ ಕೇಳಿಸುವದರಲ್ಲಿ ಗೀತಾ ವಸಂತ ಅವರ ಈ ಅಧ್ಯಯನ ಪ್ರಬಂಧ ನಿರತವಾಗಿದೆ.
ಗೀತಾ ವಸಂತ- ಕವಯತ್ರಿ, ಕಥೆಗಾರ್ತಿ ಮತ್ತು ವಿಮರ್ಶಕಿ. ಗೀತಾ ಅವರು ಹುಟ್ಟಿದ್ದು ಶಿರಸಿಯ ಎಕ್ಕಂಬಿ ಸಮೀಪದ ಕಾಡನಡುವಿನ ಒಂಟಿಮನೆ ಕಾಟೀಮನೆಯಲ್ಲಿ 1976 ಏಪ್ರಿಲ್ 20 ರಂದು . ಈಗ ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸಿರುವ ಅವರು ಡಿವಿಜಿ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸಹ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಚೌಕಟ್ಟಿನಾಚೆಯವರು’ ಇವರ ಪ್ರಮುಖ ಕಥಾ ಸಂಕಲನ. ’ಹೊಸಿಲಾಚೆ ಹೊಸ ಬದುಕು , ಪರಿಮಳದ ಬೀಜ’ ಗೀತಾ ವಸಂತ ಅವರ ಕವನಸಂಕಲನಗಳು. ಬೆಳಕಿನ ಬೀಜ, ಬೇಂದ್ರೆ ಕಾವ್ಯ - ಅವಧೂತ ಪ್ರಜ್ಞೆ, ಹೊಸ ದಿಗಂತದ ಹೊಸದಾರಿ ಇವರ ...
READ MORE