ಲೇಖಕರಾದ ಎಂ.ಆರ್. ದತ್ತಾತ್ರಿ ಅವರ ಪ್ರಬಂಧಗಳ ಸಂಕಲನ ’ಪೂರ್ವ ಪಶ್ಚಿಮ’. ಲೇಖಕರು ತಾವು ಪಡೆದ ಅನುಭವಗಳೊಂದಿಗೆ ತಮ್ಮ ಭಾಷೆಯ ನುಡಿಗಟ್ಟನ್ನು ಮುಖಾಮುಖಿಯಾಗಿಸಿಕೊಳ್ಳುತ್ತಾ ಓದುಗರಿಗೆ ತಮ್ಮ ಬರಹಗಳನ್ನು ನೀಡಿದ್ಧಾರೆ. ತಮ್ಮ ಸಾಹಿತ್ಯಿಕ, ಸಾಮಾಜಿಕ, ವೈಚಾರಿಕತೆಯ ಅರಿವು, ಮತ್ತು ನಿಲುವುಗಳನ್ನು ತಮ್ಮ ಬರಹಗಳಲ್ಲಿ ಹಿಡಿದಿಟ್ಟಿದ್ಧಾರೆ. ಅವರ ವಿಭಿನ್ನ ಲೋಕಗಳ, ವಿಭಿನ್ನ ಅನುಭವಗಳ ಕಥನ ಶೈಲಿಯು ಈ ಕೃತಿಯಲ್ಲಿನ ಪ್ರಬಂಧಗಳಲ್ಲಿ ವ್ಯಕ್ತವಾಗಿದೆ ಎನ್ನಬಹುದು. ಈ ಪುಸ್ತಕವು ಹಾಮಾನಾ ಪ್ರಶಸ್ತಿ ವಿಜೇತ ಕೃತಿಯಾಗಿದೆ.
ಕಾದಂಬರಿಕಾರ, ಕವಿ, ಅಂಕಣಕಾರ, ಮತ್ತು ಅನುವಾದಕರಾಗಿ ಎಂ ಆರ್ ದತ್ತಾತ್ರಿ ಯವರು ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮೂಲದ ಊರು ಚಿಕ್ಕಮಗಳೂರು. ಮೈಸೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ನಲ್ಲಿ ಇಂಜಿನಿಯ ರಿಂಗ್ ಪದವಿ ಪಡೆದು ಕೆಜಿಎಫ್, ಪುಣೆ, ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಲಾಸ್ ಏಂಜಲಿಸ್ ನಗರಗಳಲ್ಲಿ ವೃತ್ತಿ ಜೀವನ ನಡೆಸಿ ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅನೇಕ ಸಾಧನೆಗಳ ಕೀರ್ತಿ ದತ್ತಾತ್ರಿಯವರದ್ದಾಗಿದೆ. ಇಆರ್‌ಪಿ ಕ್ಲೌಡ್ ಟೆಕ್ನಾಲಜಿ ಕ್ಷೇತ್ರದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಅನೇಕ ಬಹುರಾಷ್ಟ್ರೀಯ ಕಂಪನಿಗಳ ಜೊತೆ ಕೆಲಸ ಮಾಡಿದ ಅನುಭವವು ಅವರದ್ದು. ಅಮೆರಿಕ ಮತ್ತು ಭಾರತದ ಅನೇಕ ...
READ MORE