ಲೇಖಕ ಡಾ. ಎಂ. ಶಿವರಾಂ (ರಾಶಿ) ಅವರ ಪ್ರಬಂಧ ಕೃತಿ ʼಮನನʼ. ಪುಸ್ತಕದ ಮುನ್ನುಡಿಯಲ್ಲಿ, “ಮನನದಲ್ಲಿನ ಪ್ರಬಂಧಗಳು ಹೊಸತನದಿಂದ ಕೂಡಿವೆ. ನಮ್ಮ ಸಮಾಜದ ಸಂಸ್ಕೃತಿಯಲ್ಲಿ ಅನೂಚಾನವಾಗಿ ಬಂದ ಹಲವು ನುಡಿಗಟ್ಟುಗಳು, ಸಂಪ್ರದಾಯಗಳನ್ನು ಮುಕ್ತ ಮನಸ್ಸು ಹಾಗೂ ತಾರ್ಕಿಕ ದೃಷ್ಟಿಯಿಂದ ಅವಲೋಕಿಸಿ, ಅವುಗಳ ಹಿನ್ನೆಯಲ್ಲಿರಬಹುದಾದ ಸತ್ಯಾಂಶಗಳನ್ನು ಹೆಕ್ಕಿ ತೆರೆಯುವುದು ಈ ಪ್ರಬಂಧಮಾಲೆಯ ಉದ್ದೇಶವಾಗಿದೆ. ಕಾಲ ಭೈರವ ಎಂಬ ಪುಟ್ಟ ಪ್ರಬಂಧದಲ್ಲಿ ಅವರು ಕಾಲದ ವೈಜ್ಞಾನಿಕ ಸ್ವರೂಪವನ್ನು ಸಾಮಾನ್ಯ ಜನರಿಗೆ ತಿಳಿಯುವ ಭಾಷೆಯಲ್ಲಿ ವಿವರಿಸಿದ್ದಾರೆ. ಶಕುನಗಳಲ್ಲಿನ ನಂಬಿಕೆಯಾಗಲೀ, ನಗುವಿನಂತಹ ಸಹಜ ಪ್ರಕ್ರಿಯೆಯಾಗಲೀ ರಾಶಿಯವರ ಚಿಂತನೆಯ ಮೂಸೆಯಲ್ಲಿ ಕರಗಿ ಹೊರಬರುವಾಗ ಅಪ್ಪಟ ಅಪರಂಜಿಯ ಹೊಳಹನ್ನು ಪಡೆಯುವ ಚಮತ್ಕಾರವನ್ನು ಇಲ್ಲಿ ಕಾಣಬಹುದು. ಅನೇಕ ಕೌತುಕಮಯ ವೈಜ್ಞಾನಿಕ ಚಿಂತನೆಗಳನ್ನು ನಮ್ಮ ಸನಾತನ ಧರ್ಮದ ಒರೆಗಲ್ಲಿನಲ್ಲಿ ತೀಡಿ ಮನನಯೋಗ್ಯವಾದ ಸಾಮ್ಯಗಳನ್ನು ರಾಶಿಯವರು ಈ ಪುಸ್ತಕದಲ್ಲಿ ಓದುಗರಿಗೆ ಉಣಬಡಿಸಿದ್ದಾರೆ” ಎಂದು ಹೇಳಲಾಗಿದೆ.
©2024 Book Brahma Private Limited.