ವೇದಗಳ ಕಾಲದಿಂದ ಆಧುನಿಕ ಕಾಲದವರೆಗಿನ ಆರೋಗ್ಯದ ಪರಿಕಲ್ಪನೆಯನ್ನು ವಿವರಿಸುವ ಗ್ರಂಥ ’ಪ್ರೇಮ ಸೌಂದರ್ಯ ಆನಂದ’.
ದೇಹದ ಸ್ವಾಸ್ಥ್ಯ ಕಾಪಾಡಲು ಅಂಗಸಾಧನೆ ಮತ್ತು ಪೌಷ್ಠಿಕ ಆಹಾರ ಏಕೆ ಮುಖ್ಯ ಎಂಬುದನ್ನು ವಿವರಿಸುತ್ತಲೇ ಪರಬ್ರಹ್ಮ ಪರಿಕಲ್ಪನೆ, ದೇವರ ಅಸ್ತಿತ್ವದ ಬಗ್ಗೆ ಋಗ್ವೇದ ಹೇಳುವ ಮಾತು, ರಾಮಾಯಣ ಮಹಾಭಾರತ ಕಾಲದ ವಿಜ್ಞಾನ ಮುಂತಾದ ಸಂಗತಿಗಳ ಕುರಿತಂತೆಯೂ ಕಣ್ಣಾಡಿಸುತ್ತದೆ.
ಒಟ್ಟು ಒಂಬತ್ತು ಲೇಖನಗಳಿರುವ ಕೃತಿ ಯೋಗಸಾನದ ವೈಶಿಷ್ಟ್ಯಗಳನ್ನೂ ಹೇಳುತ್ತದೆ. ಆರೋಗ್ಯದ ಕುರಿತು ಮಾತನಾಡುತ್ತಲೇ ತಾತ್ವಿಕ ಜಿಜ್ಞಾಸೆಗಳನ್ನೂ ಮುಂದಿಡುತ್ತ ಓದುಗರನ್ನು ಸೆಳೆಯುತ್ತದೆ.