‘ನೀನಿಲ್ಲದೇ ನನಗೇನಿದೇ!’ ಲೇಖಕಿ ಛಾಯಾ ಭಗವತಿ ಅವರ ಪ್ರಬಂಧ ಸಂಕಲನ. ಬದುಕಿನ ಹಲವು ಅನುಭವಗಳಿಗೆ ಸೃಜನಶೀಲ ಬರವಣಿಗೆಯ ಮೂಲಕ ಹೊಸ ರೂಪು ನೀಡಿದ್ದಾರೆ. ಸಂಕಲನದ ‘ಬೇರಿಗಿಳಿದ ನೀರು’ ಪ್ರಬಂಧದಿಂದ ಆಯ್ದ ಕೆಲವು ಸಾಲುಗಳು: ನನ್ನೆರಡು ಮಕ್ಕಳು ಶಾಲೆಯಿಂದ ಮರಳಿ ಬರುವುದನ್ನೇ ಕಾಯುತ್ತಾ, ಶ್ರೀಮತಿ ಪಾರ್ವತಿ ರಾಮನ್ನರ ಮಾತುಗಳನ್ನೇ ಮೆಲುಕು ಹಾಕುತ್ತ ಮರುಮುಂಜಾವಿನ ಚಪಾತಿಗೆ ಚವುಳಿಕಾಯಿ ಸೋಸುತ್ತಾ ಕೂತೆ, ನಾಳೆ ದೊಡ್ಡವರಾದ ಮೇಲೆ ನನ್ನ ಮಕ್ಕಳ ಏನೆಲ್ಲಾ ಮಾತಾಡಿ ನನ್ನನ್ನು ಅಳಿಸಬಹುದು, ನನ್ನ ಪ್ರತಿಕ್ರಿಯೆ ಹೇಗಿರಬಹುದು ಎಂದೆಲ್ಲ ಕಲ್ಪಿಸಿಕೊಂಡು ನಕ್ಕವಳಿಗೆ ಮಕ್ಕಳಿಗಾಗಿ ಮೆಕ್ಕೆತೆನೆ ಬೇಯಿಸುವ ಕೆಲಸ ನೆನಪಾಗಿ ಯೋಚನೆಗಳಿಗೆ ಬ್ರೇಕು ಹಾಕಬೇಕಾಯಿತು. ಈ ಸಲ ಗುಡಿಗೆ ಹೋದಾಗ ನನ್ನುಳಿತಾಯದ ಹಣವನ್ನೇ ಮಂಗಳಾರತಿ ತಟ್ಟೆಗೆ ಹಾಕುವ ಕ್ರಾಂತಿಕಾರಿ ಯೋಚನೆಯೂ ಮೂಡದೇ ಇರಲಿಲ್ಲ…ಈ ರೀತಿಯ ಹಲವು ಪ್ರಬಂಧಗಳು ಈ ಕೃತಿಯಲ್ಲಿ ಸಂಕಲನಗೊಂಡಿವೆ.
©2024 Book Brahma Private Limited.