‘ಪ್ರಿಯಸಖೀ... ಪಾತರಗಿತ್ತೀ...' ಕೃತಿಯು ಸುಧಾ ಚಿದಾನಂದಗೌಡ ಅವರ ಪ್ರಬಂಧಸಂಕಲನವಾಗಿದೆ. ಈ ಕೃತಿಯ 10 ಪ್ರಬಂಧಗಳಲ್ಲೂ ವಿಷಯ ವೈವಿಧ್ಯತೆಯಿದ್ದು, ಪ್ರತಿಯೊಂದು ವಸ್ತು, ವಿಷಯದ ಬಗ್ಗೆಯೂ ಇತಿಹಾಸವನ್ನು ತೆರೆದಿಡುತ್ತಲೇ ವೈಚಾರಿಕತೆಯ ಹಿಡಿತವಿದೆ. ಅವಮಾನದಿಂದ ಸೆಟೆದು ನಿಂತು ಸೇಡು ತೀರಿಸಿಕೊಳ್ಳುವರು, ಇಲ್ಲವೇ ಮನೋವ್ಯಾಕುಲಕ್ಕೆ ಈಡಾಗುವರು, ಸಹಿಸಿಕೊಳ್ಳಲಾಗದವರು ಆತ್ಮಹತ್ಯೆ ಮಾಡಿಕೊಳ್ಳುವರು.
ನಮ್ಮ ಅಸಹಾಯಕತೆ, 'ಅಹಂ'ನ ಅರಿವಿದ್ದಾಗ ಮಾತ್ರ ಅವಮಾನವು ಕಾಡುವುದಿಲ್ಲ. `ಹಿನ್ನೀರು ಎಂಬ ಜೀವ ತಾಣ' ಕವಯಿತ್ರಿ, ಕಣ್ಣಿಗೆ ಕಟ್ಟುವಂತೆ ನಿಸರ್ಗಸೌಂದರ್ಯ ವರ್ಣಿಸುತ್ತಾರೆ. ತುಂಗಭದ್ರ ಅಣೆಕಟ್ಟನ್ನು ಕಟ್ಟುವಾಗ 'ಮುಳುಗಡೆಯಾದಾಗ ಇದ್ದ ಜನರು ಗುಳೇ ಹೋದ ಸ್ಥಿತಿಗತಿಗಳನ್ನು ಹೇಳುತ್ತಲೇ, ಬಯಲುಸೀಮೆಯಲ್ಲಿ ಜೀವಸಮೃದ್ಧಿ-ವೈವಿಧ್ಯತೆಯನ್ನು ಸೃಷ್ಟಿಸಿದ ಅಣೆಕಟ್ಟಿನ ಐತಿಹಾಸಿಕ ಹಿನ್ನಲೆಯನ್ನು ಹೇಳುತ್ತಾರೆ.
ಪ್ರಪಂಚದಾದ್ಯಂತ ಹೆಸರಾಗಿರುವ ಅಣೆಕಟ್ಟುಗಳ ಕಿರುಪರಿಚಯವಿದೆ. ಮತ್ತೊಂದು ಮನಕಲಕುವಂತಹ 'ಕೋತಿ ಕಥನ' ತನ್ನ ಕಣ್ಣು ಮುಂದೆಯೇ, ತನ್ನ ಮರಿಯು ಟ್ರಾಕ್ಟರ್ ಕೆಳಗೆ ಸಿಕ್ಕಿ ಸತ್ತ ರಕ್ತ ಸಿಕ್ತ ದೇಹವನ್ನು ಕಂಡು ಮನೋವಿಕಲ್ಪವಾಗಿ ವಾಹನಗಳಲ್ಲಿರುವ ಡ್ರೈವರ್‌ಗಳನ್ನು ಕಂಡರೆ ಸಾಕು ಪರಚಿ, ಕಚ್ಚಿ ಹಿಂಸಿಸುವ ಹಂತಕ್ಕೆ ತಲುಪುವುದು, ಪಕ್ಷಿಸಂಕುಲದ 'ಕೋಳಿಯ ಕುಟುಂಬ', ಕೀಟ ಸಂಬಂಧಿ 'ಪ್ರಿಯ ಸಖಿ ಪಾತರಗಿತ್ತಿ' ಹಣ್ಣಿನ ರಾಜ 'ಮೋಹದೊಳಗಾದ ಮಾವು' ಪ್ರಬಂಧಗಳು ನಮ್ಮ ಬಾಲ್ಯದ ನೆನಪುಗಳನ್ನು ಮರುಕಳಿಸುವಂತಹದಾಗಿವೆ.
(ಹೊಸತು, ಸೆಪ್ಟೆಂಬರ್ 2014, ಪುಸ್ತಕದ ಪರಿಚಯ)
ಶ್ರೀಮತಿ ಸುಧಾ ಚಿದಾನಂದಗೌಡ ಅವರು ಉತ್ತಮ ಕಥೆಗಾರರಲ್ಲದೆ, ಅತ್ಯುತ್ತಮ ಪ್ರಬಂಧಕಾರರು ಕೂಡ. ಈ ಕೃತಿಯ ೧೦ ಪ್ರಬಂಧಗಳಲ್ಲೂ ವಿಷಯ ವೈವಿಧ್ಯತೆಯಿದ್ದು, ಪ್ರತಿಯೊಂದು ವಸ್ತು, ವಿಷಯದ ಬಗ್ಗೆಯೂ ಇತಿಹಾಸವನ್ನು ತೆರೆದಿಡುತ್ತಲೇ ವೈಚಾರಿಕತೆಯ ಹಿಡಿತವಿದೆ. ನನ್ನನ್ನು ಹೆಚ್ಚು ಹಿಡಿದಿಟ್ಟಿದ್ದು “ಅವಮಾನಗಳನ್ನು ಕುರಿತು. ಅವಮಾನದಿಂದ ಸೆಟೆದು ನಿಂತು ಸೇಡು ತೀರಿಸಿಕೊಳ್ಳುವರು, ಇಲ್ಲವೇ ಮನೋವ್ಯಾಕುಲಕ್ಕೆ ಈಡಾಗುವರು, ಸಹಿಸಿಕೊಳ್ಳಲಾಗ ದವರು ಆತ್ಮಹತ್ಯೆ ಮಾಡಿಕೊಳ್ಳುವರು. ನಮ್ಮ ಅಸಹಾಯಕತೆ, 'ಅಹಂ'ನ ಅರಿವಿದ್ದಾಗ ಮಾತ್ರ ಅವಮಾನವು ಕಾಡುವುದಿಲ್ಲ. ಹಿನ್ನೀರು ಎಂಬ ಜೀವ ತಾಣ' ಕವಿಯಿತ್ರಿ, ಕಣ್ಣಿಗೆ ಕಟ್ಟುವಂತೆ ನಿಸರ್ಗಸೌಂದರ್ಯ ವರ್ಣಿಸುತ್ತಾರೆ. ತುಂಗಭದ್ರ ಅಣೆಕಟ್ಟನ್ನು ಕಟ್ಟುವಾಗ 'ಮುಳುಗಡೆಯಾದಾಗ ಇದ್ದ ಜನರು ಗುಳೇ ಹೋದ ಸ್ಥಿತಿಗತಿಗಳನ್ನು ಹೇಳುತ್ತಲೇ, ಬಯಲುಸೀಮೆಯಲ್ಲಿ ಜೀವಸಮೃದ್ಧಿ-ವೈವಿಧ್ಯತೆಯನ್ನು ಸೃಷ್ಟಿಸಿದ ಅಣೆಕಟ್ಟಿನ ಐತಿಹಾಸಿಕ ಹಿನ್ನಲೆಯನ್ನು ಹೇಳುತ್ತಾರೆ. ಪ್ರಪಂಚದಾದ್ಯಂತ ಹೆಸರಾಗಿರುವ ಅಣೆಕಟ್ಟುಗಳ ಕಿರುಪರಿಚಯವಿದೆ. ಮತ್ತೊಂದು ಮನಕಲಕುವಂತಹ 'ಕೋತಿ ಕಥನ' ತನ್ನ ಕಣ್ಣು ಮುಂದೆಯೇ, ತನ್ನ ಮರಿಯು ಟ್ರಾಕ್ಟರ್ ಕೆಳಗೆ ಸಿಕ್ಕಿ ಸತ್ತ ರಕ್ತ ಸಿಕ್ತ ದೇಹವನ್ನು ಕಂಡು ಮನೋವಿಕಲ್ಪವಾಗಿ ವಾಹನಗಳಲ್ಲಿರುವ ಡ್ರೈವರ್‌ಗಳನ್ನು ಕಂಡರೆ ಸಾಕು ಪರಚಿ, ಕಚ್ಚಿ ಹಿಂಸಿಸುವ ಹಂತಕ್ಕೆ ತಲುಪುವುದು, ಪಕ್ಷಿಸಂಕುಲದ 'ಕೋಳಿಯ ಕುಟುಂಬ', ಕೀಟ ಸಂಬಂಧಿ 'ಪ್ರಿಯ ಸಖಿ ಪಾತರಗಿತ್ತಿ' ಹಣ್ಣಿನ ರಾಜ 'ಮೋಹದೊಳಗಾದ ಮಾವು' ಪ್ರಬಂಧಗಳು ನಮ್ಮ ಬಾಲ್ಯದ ನೆನಪುಗಳನ್ನು ಮರುಕಳಿಸುವಂತಹದಾಗಿವೆ. ಕಾಡಿದ ಸಿನಿಮಾ “ಪರ್ಲ್ ಹಾರ್ಬರ್” – ದಿ ಲೆಗಸಿ ಆಫ್ ಅಟ್ಯಾಕ್ ಬಾಂಬ್ ದಾಳಿಯಿಂದ ಉಂಟಾಗುವ ಭೀಕರತೆಯನ್ನು ಪರಿಚಯಿಸುತ್ತದೆ. ಸ್ವಾತಂತ್ರ್ಯ ಚಳುವಳಿಯ ಇತಿಹಾಸ ಪುಟಗಳನ್ನು ತಿರುವಿ ಹಾಕುವಂತಹದು 'ಗಾಂಧಿಗಿರಿ ಮತ್ತು ಸಾಬರ್ಮತಿ' ಕನ್ನಡ ಭಾಷೆಯ ಬಗ್ಗೆ ಹೇಳುವಂತಹದು * ಇಂಗ್ಲಿಷ್, ಕನ್ನಡಗಳ ಜೋಕಾಲಿ, ಸುಂದರ ಮುಖಪುಟದೊಂದಿಗೆ ವೈವಿಧ್ಯಪೂರ್ಣವಾದ ಲೇಖನಗಳು ಈ ಕೃತಿಯಲ್ಲಿವೆ.
©2024 Book Brahma Private Limited.