ಕರ್ನಾಟಕ ಸಾಹಿತ್ಯ ಅಕಾಡಮಿಯು ದಿನಾಂಕ 22-3-1992ರಂದು ಹಾಸನದಲ್ಲಿ ಏರ್ಪಡಿಸಿದ್ದ‘ರಾಷ್ಟ್ರೀಯ ಚಳುವಳಿ ಮತ್ತು ಗೊರೂರರ ಸಾಹಿತ್ಯ’ ಎಂಬ ವಿಚಾರ ಸಂಕಿರಣದಲ್ಲಿ ಮಂಡಿತವಾದ ಪ್ರಬಂಧಗಳನ್ನು ಸಂಕಲಿಸಿ ಈ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗಿದೆ. ಗೊರೂರರ ಕೃತಿಗಳಲ್ಲಿ ಸ್ವಾತಂತ್ಯ್ರ ಚಳುವಳಿಯ ಪ್ರೇರಣೆಗಳು -ಡಾ.ಎಸ್. ಚಂದ್ರಶೇಖರ್, ಗೊರೂರರ ಸಾಹಿತ್ಯದಲ್ಲಿ ಸುಧಾರಣವಾದದ ನೆಲೆಗಳು -ಶಿವರಾಮು ಕಾಡನಕುಪ್ಪೆ, ರಾಷ್ಟ್ರೀಯ ಚಳುವಳಿ, ನವೋದಯ ಸಾಹಿತ್ಯ ಮತ್ತು ಗೊರೂರು -ಜಿ.ಎಸ್.ಅವಧಾನಿ, ದೇಶೀಯ ವ್ಯಕ್ತಿತ್ವದ ಶೋಧನೆ ಮತ್ತು ಗೊರೂರರ ವ್ಯಕ್ತಿ ಚಿತ್ರಗಳು-ಸಿ.ಜಿ.ವೆಂಕಟಯ್ಯ, ಗೊರೂರರ ಚಿಂತನೆಯ ನೆಲೆಗಳು-ಒಂದು ನೋಟ -ಡಾ.ಹಿ.ಶಿ ರಾಮಚಂದ್ರೇಗೌಡ ಸೇರಿ ಸೇರಿ ಐದು ಪ್ರಬಮಧಗಳು ಈ ಕೃತಿಯಲ್ಲಿವೆ.
©2024 Book Brahma Private Limited.