ಲೇಖಕ ಜಿ.ವಿ. ಆನಂದಮೂರ್ತಿ ಅವರ ಪ್ರಬಂಧ ಸಂಕಲನ-ಕರುಣೆಯ ಹೊಲ ಮತ್ತು ಇತರ ಪ್ರಬಂಧಗಳು. ಕೂಡಿಸುವ ದೇವತೆಗಳು, ಬೇಸಗೆಯ ರಜೆ ದಿನಗಳು, ಕೇರಿಯಲ್ಲೊಂದು ಮಹಾಮನೆ, ಕರುಣೆಯ ಹೊಲ, ನಮ್ಮ ಊರಿನ ಸಂತರು, ಸ್ವರ್ಗದ ತುಣುಕು, ಉದಾರ ಚರಿತರು, ಇಲ್ಲದ ನದಿಯ ಹುಡುಕುತ್ತಾ, ಬಯಲು ಸೀಮೆಯ ಕಾಡೊಳಗೊಂದು ಪಯಣ, ಹಾರಿ ಹೋದ ಹಂಸೆಯ ಧ್ಯಾನ, ಭಾರತದ ಗ್ರಾಮಗಳ ಆತ್ಮಗೀತೆ ಸೇರಿದಂತೆ ಒಟ್ಟು ಹದಿಮೂರು ಪ್ರಬಂಧಗಳನ್ನು ಒಳಗೊಂಡಿದೆ. ತಮ್ಮ ಎಳೆತನದ ಬದುಕಿನ ನೆನಪುಗಳನ್ನೇ ಆಧರಿಸಿ ಈ ಪ್ರಬಂಧ ಸಂಕಲನವನ್ನು ರೂಪಿಸಿದ್ದಾಗಿ ಲೇಖಕರು ಪ್ರಸ್ತಾವನೆಯ ನುಡಿಗಳಲ್ಲಿ ಹೇಳಿದ್ದಾರೆ.
ಡಾ. ಜಿ.ವಿ.ಆನಂದಮೂರ್ತಿ ಅವರು ಮೂಲತಃ ತುಮಕೂರು ಜಿಲ್ಲೆಯ ಬೆಳ್ಳಾವೆ ಮಜರೆ ಗ್ರಾಮದ ತಿಗಳರ ಗೊಲ್ಲಹಳ್ಳಿಯವರು. ತುಮಕೂರು ಮತ್ತು ಬೆಂಗಳೂರಿನಲ್ಲಿ ಪದವಿವರೆಗೆ ಶಿಕ್ಷಣ ಪಡೆದು ನಂತರ ಮೈಸೂರು ವಿಶ್ವವಿದ್ಯಾನಿಲಯದಿಂದ (2005) ರಲ್ಲಿ ಪಿಎಚ್.ಡಿ ಪಡೆದರು. ಸಾಹಿತಿ-ಲೇಖಕರಾಗಿರುವ ಅವರು (1998-2001)ರಲ್ಲಿ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿದ್ದರು. ಕೃತಿಗಳು: ಬುದ್ದತೋರಿದ ದಾರಿ (ಬುದ್ಧದೇವನ ಜೀವತದ ವಿವರಗಳು), ನೀರಗಂಧ (ಕವನಸಂಕಲನ), ಹೊಳೆಸಾಲು (ಜನಪದ ಕಲಾವಿದರನ್ನು ಕುರಿತ ಬರಹ), ಜಾಲಾರ ಹೂವು (ಪ್ರಬಂಧ). ಶಾಂತವೇರಿ ಗೋಪಾಲಗೌಡ ನೆನಪಿನ ಸಂಪುಟ, ಗರಿಗೆದರಿದ ನವಿಲು (ಜನಪದ ಕಲಾವಿದರ ಆತ್ಮಕಥೆಗಳ ನಿರೂಪಣೆ), ಸಾಲ ಸಂಪಿಗೆ ನೆರಳು (ಎಳೆಯರಿಗಾಗಿ ಜಾನಪದ ಹಲವು ತೋಟದ ಹೂಗಳು -ಜನಪದ ತತ್ವಪದಗಳ ...
READ MORE