‘ನಿಂತ ಬಂಡಿಯ ದೇಶಾಂತರ’ ಕೃತಿಯು ಕೆ. ಸತ್ಯನಾರಾಯಣ ಅವರ ಪ್ರಬಂಧಗಳ ಸಂಕಲನವಾಗಿದೆ. ಈ ಕೃತಿಯು 18 ವೈವಿಧ್ಯಮಯವಾದ ಪ್ರಬಂಧಗಳನ್ನು ಒಳಗೊಂಡಿದೆ. ಅನುಬಂಧದಲ್ಲಿ ‘ನಾನೇಕೆ ಬರೆಯುತ್ತೇನೆ’ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವಂತಹ ಆತ್ಮಾವಲೋಕನವು ಇಲ್ಲಿದೆ. ‘ಬರಹಗಾರನಾಗಿರುವುದೆಂದರೆ ಪ್ರಬುದ್ಧನಾಗುವುದು ಮಾತ್ರವಲ್ಲ, ನಮ್ಮ ಸೃಜನಶೀಲತೆ ಬಗ್ಗೆ ವಿನಯವನ್ನು ರೂಢಿಸಿಕೊಳ್ಳುವುದು ಕೂಡಾ ಆಗಿರುತ್ತದೆ ಎಂದು ನಾವು ಇಲ್ಲಿ ಕಾಣಬಹುದು. ಈ ಕೃತಿಯ ಬೆನ್ನುಡಿಯಲ್ಲಿ ಹೇಳಿರುವಂತೆ ಈ ಪ್ರಬಂಧ ಸಂಕಲನದಲ್ಲಿ “ಲಹರಿಯಾಗದ ಕಥನ, ಆತ್ಮರತಿಯಾಗದ ಸ್ವವಿಮರ್ಶೆ, ವ್ಯಂಗ್ಯ ಸಿನಿಕತೆಯಿಲ್ಲದ ಹಾಸ್ಯ, ಗೊಡ್ಡು, ತಾತ್ವಿಕತೆಯ ಹೊರೆಯಿಲ್ಲದ ಜೀವನ ದರ್ಶನ - ಇವೆಲ್ಲಾ ಹದವಾಗಿ ಬೆರೆತಿವೆ.
ಕೆ.ಸತ್ಯನಾರಾಯಣ ಅವರು ಹುಟ್ಟಿದ್ದು 1954 ಏಪ್ರಿಲ್ 21 ರಂದು. ಮಂಡ್ಯ ಜಿಲ್ಲಾ ಮದ್ದೂರು ತಾಲೋಕು ಕೊಪ್ಪ ಗ್ರಾಮದಲ್ಲಿ. 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ(ಸುವರ್ಣ ಪದಕದೊಂದಿಗೆ). 1978ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ(ಏಪ್ರಿಲ್ 2014ರಲ್ಲಿ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾಗಿ, ಬೆಂಗಳೂರು) ನಿವೃತ್ತಿ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ...
READ MORE