‘ಕಪ್ಪು ಹುಡುಗಿ’ ಕೃತಿಯು ಸಂಗೀತಾ ರವಿರಾಜ್ ಅವರ ಪ್ರಬಂಧಸಂಕಲನವಾಗಿದೆ. ಕೃತಿಯ ಬೆನ್ನುಡಿಯಲ್ಲಿ ’ಒಂದು ನಿರ್ದಿಷ್ಠ ಕೇಂದ್ರಕ್ಕೆ ನಿಷ್ಠರಾಗುತ್ತಲೇ ಆಆ ಕೇಂದ್ರದ ಸುತ್ತ ಲಲಿತವಾಗಿ ಹರಡಿಕೊಳ್ಳುವುದು ಪ್ರಬಂಧದ ಸಹಜ ಗುಣ. ಈ ಅರ್ಥದಲ್ಲಿ ಅದು ಕವಿತೆ ಮತ್ತು ಕತೆಯ ನಡುವೆ ನಿಂತುಕೊಳ್ಳುತ್ತದೆ. ಇವೆರಡರ ನಡುವಿನ ನೆಲೆಯಲ್ಲಿ ಇಲ್ಲಿನ ಪ್ರಬಂಧಗಳು ವಿಶಿಷ್ಟವಾಗಿ ಮೂಡಿಬಂದಿವೆ. ಇಲ್ಲಿನ ಪ್ರಬಂಧಗಳಲ್ಲಿ ಮಹಿಳೆ ಮಾತ್ರವೇ ಗೊತ್ತಿರುವ ಕೌಟುಂಬಿಕ ಲೋಕದ ಹಲವು ಸೂಕ್ಷ್ಮಗಳು ಸಶಕ್ತವಾಗಿ ಅನಾವರಣಗೊಂಡಿವೆ. ಬದುಕಿನ ಬೆರಗುಗಳನ್ನು ಹಾಗೆಯೆ ರಕ್ಷಿಸಿ ಅದನ್ನು ಅಕ್ಷರದಲ್ಲಿ ರೂಪಿಸಿದ ಕುಶಲತೆ ಇಲ್ಲಿರುವ ಪ್ರಬಂಧಗಳನ್ನು ಲಲಿತ ಪ್ರಬಂಧಗಳಿಗೆ ಬೇಕಾದ ವಸ್ತು, ಭಾಷೆ ಮತ್ತು ಶೈಲಿ ಸಂಗೀತಾ ಅವರಿಗೆ ಸಿದ್ದಿಸಿದೆಯಾದ್ದರಿಂದ ಇಲ್ಲಿನ ಪ್ರಬಂಧಗಳನ್ನು ಖುಷಿಯಿಂದ ಓದಿಕೊಳ್ಳಬಹುದು’ ಎನ್ನುತ್ತಾರೆ ಪುರುಷೋತ್ತಮ ಬಿಳಿಮಲೆ.
©2025 Book Brahma Private Limited.