ಫಾತಿಮಾ ರಲಿಯಾ ಅವರ ಲಲಿತ ಪ್ರಬಂಧಗಳ ಸಂಕಲನ ಕಡಲು ನೋಡಲು ಹೋದವಳು. ಬೊಳುವಾರು ಮಹಮದ್ ಕುಂಞಿ ಅವರು ಈ ಕೃತಿಯಲ್ಲಿ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಸಾಕಷ್ಟು ಕರುಳು ಹಿಂಡುವ ಕತೆಗಳೂ, ನರನಾಡಿಗಳನ್ನು ಕರಗಿಸಿ ಕುದಿಸುವಂತಹ ವೈಚಾರಿಕ ಬರಹಗಳೂ ದಂಡಿಯಾಗಿ ಪ್ರಕಟವಾಗುತ್ತಿರುವ ಈ ದಿನಗಳಲ್ಲಿ, ಲಲಿತ ಪ್ರಬಂಧಗಳನ್ನು ಯಾಕೆ ಓದಬೇಕು ಎನ್ನುವವರಿಗೆ ಬಾಲ ಪಾಠದಂತಿದೆ, ‘ಸುಧಾ ಯುಗಾದಿ ಪ್ರಬಂಧ ಸ್ಪರ್ಥೆಯಲ್ಲಿ ಪ್ರಥಮ ಬಹುಮಾನ’ವನ್ನೂ ಪಡೆದ ಪ್ರಬಂಧವನ್ನೊಳಗೊಂಡ ಹದಿನೇಳು ಲಲಿತ ಪ್ರಬಂಧಗಳ ಈ ಸಂಕಲನ. ಈಗಷ್ಟೇ ಕಟ್ಟಿದ ಮಲ್ಲಿಗೆ ಮಾಲೆಯೊಂದರಿಂದ ಹಗೂರ ಜಾರಿದ ಹೂವೊಂದು ಗಾಳಿ ಬೀಸಿದಾಗಲೆಲ್ಲ ತನ್ನ ಘಮವೊಂದನ್ನು ಉಳಿಸಿಕೊಳ್ಳುವಂತೆ ‘ಗದ್ಯದ ಭಾವಗೀತೆ’ ನೇಯಬಲ್ಲ ಇವರ, ‘ಉನ್ಮತ್ತ ಕುರುಕ್ಷೇತ್ರವೂ ಬೃಂದಾವನದ ಕೊಳಲೂ..’ ಎಂಬೊಂದು ತಲೆ ಬರಹದ ಪ್ರಬಂಧವೇ ಈಕೆ ಯಾರು, ಏನು ಮತ್ತು ಎತ್ತ ಎಂಬುದನ್ನು ಜಾಹೀರು ಮಾಡುತ್ತವೆ. ಮಿದು ಮನಸ್ಸಿನ ಕನ್ನಡಿಗರು ಈ ಕೃತಿಯನ್ನು ಖಂಡಿತವಾಗಿಯೂ ಪ್ರೀತಿಯಿಂದಲೇ ಓದುತ್ತಾರೆ ಎಂಬುದಾಗಿ ಹೇಳಿದ್ದಾರೆ
©2024 Book Brahma Private Limited.