‘ಏಕಾಂತ ಲೋಕಾಂತ’ ಕೃತಿಯು ಓ.ಎಲ್. ನಾಗಭೂಷಣಸ್ವಾಮಿ ಅವರ ಪ್ರಬಂಧ ಸಂಕಲನ. ಕೃತಿಗೆ ಮುನ್ನುಡಿ ಬರೆದಿರುವ ಹೆಚ್. ಎಸ್. ರಾಘವೇಂದ್ರ ರಾವ್ ಅವರು, ಈ ಲೇಖನಗಳದು ಮೂರು ನೆಲೆ. ಅನುಭವಗಳ ಸುಡುಬೆಚ್ಚಗಿನ ನೆಲೆ ಒಂದು, ಎಲ್ಲೆಲ್ಲಿಯೂ ನೆಲೆ ನಿಲ್ಲದ, ಮನೆಯನೆಂದು ಕಟ್ಟದಿರು ಎನ್ನುವ ವಿಚಾರಗಳ ನೆಲೆ ಇನ್ನೊಂದು.ಹಲವು ಸುಗಂಧಗಳ ಹರಿಕಾರನಾದ ಮಂದಾನಿಲನಂತೆ ಕೆಲಸ ಮಾಡುವ ಓದುಗುಳಿಯದು ಮೂರನೇಯ ನೆಲೆ. ಈ ಮೂರು ನೆಲೆಗಳ ನಡುವೆ ನಡೆದ ಒಳಹೊರಗು ಓಡಾಟಗಳ ದಾಖಲೆ ಇಲ್ಲಿದೆ. ಸ್ವಾಮಿಯವರ ತುಡಿತವಿರುವುದು ಅಂತರಂಗದ ಕಡೆಗೆ. ಹೊರ ಜಗತ್ತು ಎನ್ನುವುದು, ಕಡೆಗೂ ನಾವು ಕಟ್ಟುಕೊಂಡ ಸತ್ಯ ಎಂಬ ತಿಳಿವಳಿಕೆಯೊಂದಿಗೆ ಹೊರಟಾಗ, ಅದನ್ನು ಬದಲಿಸುವ ಕದಲಿಸುವ ಹಂಬಲವಾದರೂ ಎಲ್ಲಿಂದ ಬಂತು? ಅಗತ್ಯವಾದರೂ ಏನು? ಸಾಮಾಜಿಕ ಸಂಗತಿಗಳ ಮಹಾಪೂರವೇ ಹರಿದರು, ಮನುಷ್ಯನ ರಕ್ತಗತವಾದ, ಚರ್ಮಸಹಜವಾದ ವರ್ತನೆಯಲ್ಲಿ ಬದಲಾವಣೆಯನ್ನು ಕಾಣದ ನಿರೀಕ್ಷಿಸಿದ ಮನಸ್ಸು ಇಲ್ಲಿ ಕೆಲಸ ಮಾಡಿದೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.