‘ಮಣ್ಣಿನ ವಾಸನೆ’ ಹಿರಿಯ ಕವಿ ಗೋಪಾಲಕೃಷ್ಣ ಅಡಿಗ ಅವರ ಪ್ರಬಂಧಗಳ ಸಂಕಲನ. ಅಡಿಗರಿಗೆ ಸಾಹಿತ್ಯಕ ಮತ್ತು ರಾಜಕೀಯ ವಿಷಯಗಳ ಕುರಿತ ಸಮಗ್ರ ದೃಷ್ಟಿಯ ಅರಿವು ನಮಗೆ ತಿಳಿಯುತ್ತದೆ. ಇಲ್ಲಿರುವ ಲೇಖನಗಳು ಮತ್ತು ಅವರ ಕಾವ್ಯಗಳನ್ನು ಒಟ್ಟೊಟ್ಟಿಗೆ ಗಮನಿಸಿದಾಗ ಅವರಿಗಿರುವ ಕಾವ್ಯ ಮತ್ತು ಜೀವನಗಳ ಅನ್ಯೋನ್ಯ ಸಂಬಂಧದ ಅರಿವು ಆಗುತ್ತದೆ. ಅಡಿಗರ ಜೀವನ ದೃಷ್ಟಿ ಬೇರೆ ಅಲ್ಲ ಕಾವ್ಯ ದೃಷ್ಟಿ ಬೇರೆ ಅಲ್ಲ. ಕಾವ್ಯ ತಮ್ಮ ಜೀವನವನ್ನು ಅರ್ಥಪೂರ್ಣ ಮಾಡಿಕೊಳ್ಳಲು ನಡೆಸುವ ಹೋರಾಟ, ಆದ್ದರಿಂದಲೇ ಭಾಷೆಯ ಬಳಕೆಯಲ್ಲಿ ಅವರದ್ದು ಅನ್ವೇಷಕ ದೃಷ್ಟಿ, ಭಾಷೆಯ ಸಾಧ್ಯತೆಯ ಅನ್ವೇಷಣೆಯ ಮೂಲಕವೇ ತಮ್ಮ ಜೀವನದ ಅರ್ಥಪೂರ್ಣ ಅನ್ವೇಷಣೆಯಲ್ಲೂ ಅವರು ತೊಡಗುತ್ತಾರೆ ಇಲ್ಲಿಯ ಪ್ರಬಂಧಗಳಲ್ಲಿ ಆ ಅನ್ವೇಷಣೆಯನ್ನು ಗಮನಿಸಬಹುದಾಗಿದೆ.
©2024 Book Brahma Private Limited.