ಸಾಗರ ಯಾನದ ಬಣ್ಣದ ತೆರೆಗಳು ಜಯಪ್ರಕಾಶ ಮಾವಿನಕುಳಿ ಅವರ ಕೃತಿಯಾಗಿದೆ. ಮಲೆನಾಡಿನ ಸಾಗರದಲ್ಲಿ ಕಳೆದ ಬಾಲ್ಯದ ಸಮೃದ್ಧ ನೆನಪುಗಳು ಜೆಪಿಯವರ ಪ್ರಬಂಧಗಳ ಸೊಗಸನ್ನು ಹೆಚ್ಚಿಸಲು ನೆರವಾಗಿವೆ. 'ಸಾಗರಯಾನದ ಬಣ್ಣದ ತೆರೆಗಳು' ಎಂಬ ಪುಸ್ತಕದ ಶೀರ್ಷಿಕೆಯೂ ಇದನ್ನು ಸೂಚಿಸುವಂತಿದೆ. ಊರೊಳಗಿನ ಸಂತೆಗೆ ಹೋಗಿ, ಕೊಡೆಗಳು ಸಾರ್ ಕೊಡೆಗಳು, ರೈಲು ಬಂತು ರೈಲು, ಸೈಕಲ್ ಕೀ ಜೈ, ಕೇಶಾಲಂಕಾರಿಯ ಆಸ್ಥಾನದಲ್ಲಿ, ಮುಟ್ಟಿನ ಕಥಾ ಪ್ರಸಂಗ ಮುಂತಾದ ಪ್ರಬಂಧಗಳಲ್ಲಿ ಇದನ್ನು ಕಾಣಬಹುದು. ಆಹಾ! ಬಾಲ್ಯದ ನೆನಪುಗಳೇ ಎಂಬ ಪ್ರತ್ಯೇಕ ಪ್ರಬಂಧವೂ ಈ ಕೃತಿಯಲ್ಲಿದೆ. ಮಿಕ್ಕ ಪ್ರಬಂಧಗಳಿಗಿಂತ ತುಸು ದೀರ್ಘವಾಗಿರುವ ಈ ಲೇಖನದಲ್ಲಿ ಜೆಪಿಯವರು ಬಾಲ್ಯದಲ್ಲಿ ಆಡಿದ ವಿವಿಧ ಆಟಗಳ ಸುಂದರ ವಿವರಣೆ ಇದೆ. 'ಅಯ್ಯೋ ವಸ್ತ್ರವೇ 'ಎಂಬ ಪ್ರಬಂಧದ ನಿರೂಪಕ ಕಾಲಪುರುಷನಾಗಿರುವುದು ವಿಶೇಷ. ಇಲ್ಲಿರುವ ಎಲ್ಲ ಪ್ರಬಂಧಗಳ ಬಗ್ಗೆ ಬರೆಯುತ್ತಾ ಹೋದರೆ ಮೂಗಿಗಿಂತ ಮೂಗುತಿ ಭಾರ ಅನ್ನುವಂತಾಗಬಹುದು. ಅವುಗಳನ್ನು ನೀವೇ ಓದಿ ಆನಂದಿಸಿ. ಆದರೆ 'ಕಳೆದು ಕಂಗಾಲಾದ ಎರಡು ಘಟನೆಗಳು' ಎಂಬ ಪ್ರಬಂಧದ ಬಗ್ಗೆ ಪ್ರಸ್ತಾಪ ಮಾಡಲೇಬೇಕು. ಏಕೆಂದರೆ ಅದರಲ್ಲಿನ ಮೊದಲ ಘಟನೆ, ನಾನು ಬೆಳಗಾವಿಯಲ್ಲಿದ್ದಾಗ ಜೆಪಿ ನಮ್ಮ ಮನೆಗೆ ಬಂದಾಗ ನಡೆದದ್ದು. ನಾನೂ ಅದರ ಬಗ್ಗೆ ನನ್ನ ಅಂಕಣದಲ್ಲಿ ಬರೆದಿದ್ದೆ. ಪ್ರೊಫೆಸಗಳು ಮರೆಗುಳಿಗಳಾಗಿರುತ್ತಾರೆ ಎಂಬುದನ್ನು ಸಾಬೀತು ಮಾಡಿದ ಆ ಘಟನೆಯನ್ನು ನಾನು ಎಂದಿಗೂ ಮರೆಯಲಾರೆ. ಎಚ್. ಡುಂಡಿರಾಜ್ ಅವರು ಪುಸ್ತಕದ ಡುಂನುಡಿಯಲ್ಲಿ ತಿಳಿಸಿದ್ದಾರೆ.
ಕಾಲು ಕಥಾನಕ, ಮುದುಕರಿಗಿದು ಕಾಲವಲ್ಲ ,ಟಿಕೆಟ್! ಟಿಕೆಟ್!! ಎಲ್ಲಾ ಲೊಳಲೊಟ್ಟೆ ಇದು ಬರೇ ಮಾತಲ್ಲ ಅಣ್ಣಾ! , ಸಂಶಯಾಸುರನ ವಧೆ, ನಮಗ್ಯಾಕೆ ಅವರ ಮನೆ ಸುದ್ದಿ!. ಪೋಸ್ಟ್ ಬಂತಾ ಪೋಸ್ಟ್ ,ಪರದೇಶಿ ಪ್ರಹಸನ, ಬಾಲ ಬಿಚ್ಚ ಬೇಡ ಹುಷಾರ್ ,ಬಳೆಗಾರ ಬಂದಾರೆ ಬರಿ ಕೈಲಿ ಬರಲಿಲ್ಲ, ಚಪ್ಪಲಿಗಳು ಸಾರ್, ಚಪ್ಪಲಿಗಳು, ಊರೊಳಗಿನ ಸಂತೆಗೆ ಹೋಗಿ, ಕೊಡೆಗಳು, ಸಾರ್, ಕೊಡೆಗಳು ,ಮಾತು - ಕತೆ ,ರೈಲು ಬಂತು... ರೈಲು ಬಂತು, ಸೈಕಲ್ ಕೀ ಜೈ, ಕೇಶಾಲಂಕಾರಿಯ ಆಸ್ಥಾನದಲ್ಲಿ, ಮುಟ್ಟಿನ ಕಥಾ ಪ್ರಸಂಗ...ಯಾರು ಹಿತವರು ನಿಮಗೆ – ಈ ಮೂವರೊಳಗೆ? ಪ್ರವಾ(ಯಾ)ಸ ಕಲ್ಲುಗಳು ಕೂಗುತಿವೆ ಕೇಳಿದಿರಾ?, ಕರೋನಾ ಅಪ್ಪನೊಡನೆ ಮುಖಾಮುಖಿ, ಅಡುಗೆಮನೆ ಆಖ್ಯಾನ, ಆಹಾ! ಬಾಲ್ಯದ ನೆನಪುಗಳೇ ,ಕಳೆದು ಕಂಗಾಲಾದ ಎರಡು ಘಟನೆಗಳು, ಕಾಡುಕೋಣನಿಗೆ ನಾಡುಕೋಣನ ಬಹಿರಂಗ ಪತ್ರ 29, ಭಾಷಣಕಾ(ಕೋ)ರರು, ಮಳೆ ಬಂತೆ, ಮಳೆ ಮಳೆ ಬ೦ತೈ 30 ಪರಿವಿಡಿಗಳನ್ನು ಈ ಕೃತಿಯಲ್ಲಿದೆ.
©2024 Book Brahma Private Limited.