ಪುಟ್ಟ ಪಾದಗಳ ಪುಳಕ ಜಿ. ಎನ್ ರಂಗನಾಥ ರಾವ್ ಅವರ ಲಲಿತ ಪ್ರಬಂಧಗಳ ರಚನೆಯಾಗಿದೆ. 'ಸಂವೇದನೆಯೂ ಕೋವಿಡ್ ಒಂದು ಮುಂಜಾನೆಯ' ಪ್ರಬಂದ ಪ್ರಾಚೀನದಿಂದ ಅರ್ವಾಚೀನದವರೆಗೆ ಅವರ ವಸ್ತುವ್ಯಾಪ್ತಿ ಇರುವುದನ್ನು ಸೂಚಿಸುವಂತಿದೆ. ಹೀಗೊಬ್ಬರು ವೈದ್ಯಭಾನು ಅವರ ತೀರ್ಥರೂಪರ ವ್ಯಕ್ತಿ ಚಿತ್ರವನ್ನು ಜೀವಂತವಾಗಿ ಕಟ್ಟಿಕೊಡುವಲ್ಲಿ ಪುತಿನ ಅವರ ಗೋಕುಲಾಷ್ಟಮಿ ಪ್ರಬಂಧವನ್ನು ನೆನಪಿಸುವಂತಿದೆ. ಕನ್ನಡದ ಸಹಜ ನುಡಿಗಟ್ಟಿನ ಬಳಕೆ ಮತ್ತು ಭಾವ ತನ್ಮಯತೆಯಿಂದ ಈ ಪ್ರಬಂಧವು ಕನ್ನಡದ ಶ್ರೇಷ್ಠ ಪ್ರಬಂಧಗಳ ಸಾಲಿಗೆ ಸೇರುವಂಥದ್ದಾಗಿದೆ. ಈಗ ಲಲಿತ ಪ್ರಬಂಧವಾಯಿತು, ಇಂಥ ಬೆರಗಿನ ಕ್ರಿಯಾಶೀಲ ಸರಕು ಮುಂದೆಯೂ ಈ ಮಾಗಿದ ಜೀವದ ಬತ್ತಳಿಕೆಯಿಂದ ಹೊರಬರಲಿದೆ ಎಂಬ ದೃಢ ವಿಶ್ವಾಸ ನನಗುಂಟು ಎಂಬುದು ಎಚ್.ಎಸ್.ವೆಂಕಟೇಶಮೂರ್ತಿ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
ನಾಡಿನ ಖ್ಯಾತ ಪತ್ರಕರ್ತ, ಹಿರಿಯ ಲೇಖಕ ಜಿ.ಎನ್.ರಂಗನಾಥ ರಾವ್ ಮೂಲತಃ ಬೆಂಗಳೂರಿನ ಹಾರೋಹಳ್ಳಿಯವರು. 1942 ರಲ್ಲಿ ಜನಿಸಿದ ಅವರು, ಕನ್ನಡ ಪತ್ರಿಕೋದ್ಯಮದಲ್ಲಿ ಹಲವು ಮೈಲಿಗಲ್ಲುಗಳನ್ನು ನಿರ್ಮಿಸಿದ್ದಾರೆ. ಹೊಸಕೋಟೆ ಹಾಗೂ ಬೆಂಗಳೂರು ನಗರಗಳಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ್ದ ಅವರು ’ನವರಂಗ’ ಕಾವ್ಯನಾಮದಿಂದ ಕೂಡ ಬರವಣಿಗೆ ಮಾಡಿದ್ದರು. ಅಲ್ಲದೇ ಪ್ರಜಾವಾಣಿ ದಿನಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಸಾಹಿತ್ಯ ಕ್ಷೇತ್ರದಲ್ಲಿಯೂ ಮಹತ್ವದ ಕಾರ್ಯ ನಿರ್ವಹಿಸಿದ್ದ ರಂಗನಾಥ ರಾವ್ ಕಾದಂಬರಿ, ಸಣ್ಣಕತೆ, ನಾಟಕ, ಪ್ರಬಂಧ ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ...
READ MORE