ಖ್ಯಾತ ಸಾಹಿತಿ ಡಾ. ಎ.ಕೆ. ರಾಮಾನುಜನ್ ಅವರ ಆಯ್ದ ಇಂಗ್ಲಿಷ್ ಪ್ರಬಂಧಗಳನ್ನು ಡಾ. ಓ.ಎಲ್. ನಾಗಭೂಷಣ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಅನ್ಯ ಭಾಷೆಗಳಲ್ಲಿರುವ ಯಾವುದೇ ಬರಹವನ್ನು ನಮ್ಮ ಭಾಷೆಗೆ ಅನುವಾದ ಮಾಡಿಕೊಳ್ಳುವುದೇ ಅದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ವಿಧಾನ. ಸಾಹಿತ್ಯಚಿಂತನೆ, ಕ್ಲಾಸಿಕಲ್ ಸಾಹಿತ್ಯ, ಜಾನಪದ, ಹೆಣ್ಣು ಭಾಷೆ ಮತ್ತು ನಿರೂಪಣೆಯ ಲಕ್ಷಣ, ಅನುವಾದ, ಸಂಸ್ಕೃತಿ ವಿಚಾರ, ತೌಲನಿಕ ಅಧ್ಯಯನ ಈ ಎಲ್ಲ ವಲಯಗಳಿಗೆ ರಾಮಾನುಜನ್ ಅವರ ಕೊಡುಗೆ ಮುಖ್ಯವಾದದ್ದು. ಸಹಾನುಭೂತಿ ಮತ್ತು ವಿಮರ್ಶಾತ್ಮಕ ಅಂತರಗಳನ್ನಿಟ್ಟುಕೊಂಡು ನಮ್ಮನ್ನು ನಾವು ಇರುವಂತೆ ಲೋಕಕ್ಕೆ ಕಾಣಿಸುವ ಮತ್ತು ನಾವು ಲೋಕದ ದೃಷ್ಟಿಗೆ ಹೇಗೆ ಕಾಣಬಹುದೆಂಬುದನ್ನು ತೋರಿಸಿಕೊಡುವ ಎರಡೂ ಅಪರೂಪದ ಕೆಲಸಗಳನ್ನು ರಾಮಾನುಜನ್ ಬರವಣಿಗೆ ಮಾಡುತ್ತದೆ. ಈ ನಿಟ್ಟಿನಲ್ಲಿ ಕೃತಿಯಲ್ಲಿಯ ಪ್ರಬಂಧಗಳು ತನ್ನ ಸಾಹಿತ್ಯಕ ಗುಣಗಳಿಂದಾಗಿ ಪರಿಣಾಮಕಾರಿಯಾಗಿವೆ.
ಓ ಎಲ್ ನಾಗಭೂಷಣ ಸ್ವಾಮಿ- ಹುಟ್ಟಿದ್ದು22 ಸೆಪ್ಟೆಂಬರ್ 1953, ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಇಂಗ್ಲಿಷ್ (1873) , ಎಂ.ಎ. ಕನ್ನಡ(1975)ಪದವಿ, ಎಂಡಿಟಿಡಿಬಿ ಕಾಲೇಜು ಮೈಸೂರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು. ಶಿಕಾರಿಪುರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆನೇಕಲ್. ಕನ್ನಡ ವಿಶ್ವವಿದ್ಯಾಲಯದಲ್ಲಿ ಭಾಷಾಂತರ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥರಾಗಿ ಸೇವೆ (1992-1998). ಜನವರಿ2005 ರಲ್ಲಿ ಉದ್ಯೋಗದಿಂದ ಸ್ವಯಂ ನಿವೃತ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕನ್ನಡ ವಿಶ್ವವಿದ್ಯಾನಿಲಯ ಕೆ. ಕೆ. ಬಿರ್ಲಾ ಫೌಂಡೇಷನ್, ಜೆ. ಕೃಷ್ಣಮೂರ್ತಿ ಪೌಂಡೇಷನ್ ಮುಂತಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಹಲವು ಮಹತ್ವದ ...
READ MORE