ಲೇಖಕರಾದ ತಿರುಪತಿ ನಾಯಕ್ ಅವರ ’ ಮುಳುಗಿದವರು’ ಕೃತಿಯು ಪ್ರಬಂಧಗಳನ್ನು ಒಳಗೊಂಡಿದೆ.
ಲೇಖಕರ ಪ್ರಬಂಧಗಳು ಜನಪರ ಕಾಳಜಿ, ಮಾನವೀಯ ವ್ಯಕ್ತಿತ್ವದೊಂದಿಗೆ ಸಮಾಜದ ನೋವುಗಳಿಗೆ ಸ್ಪಂದಿಸುವ ರೀತಿ ಬರವಣಿಗೆಯಲ್ಲಿ ಛಾಪು ಮೂಡಿಸಿದೆ. ತಿರುಪತಿ ನಾಯಕ್ ಅವರು ವರಾಹಿ ಮುಳುಗಡೆ ಸಂದರ್ಭದಲ್ಲಿ ಸೇವೆ ಸಲ್ಲಿಸಿ ಅಲ್ಲಿನ ಸಂತ್ರಸ್ತರ ಆಕ್ರಂದನಗಳನ್ನು ಮನಗಂಡಿದ್ದಾರೆ. ಅವುಗಳ ನೈಜ ಚಿತ್ರಣವನ್ನು ’ಮುಳುಗಿದವರು’ ಕೃತಿಯಲ್ಲಿ ಚಿತ್ರಿಸಲಾಗಿದೆ.
ಅಮ್ಮ ಅರ್ಥವಾಗಿಲ್ಲ, ಎತ್ತಲ್ಲವದು ಮುತ್ತು – ಮತ್ತಿತರ ಪ್ರಬಂಧಗಳು ಗ್ರಾಮೀಣ ಜೀವನದ ಮಿಡಿತಗಳನ್ನು ಆಲಿಸಿವೆ. ನನಸಾದ ಕನಸು, ಭಾರತ್-ಪಾಕ್ ಭಾವೈಕ್ಯತೆಯ ಸಹೃದಯ ಸ್ಪಂದನವಾಗಿದ್ದು, ಇಡೀ ಪುಸ್ತಕ ಪ್ರೀತಿಯಿಂದ ಓದಿಸಿಕೊಂಡು ಹೋಗುತ್ತಾ ಹೊಸ ಚಿಂತನೆಯ ಮೊಳಕೆ ಚಿಗುರಿಸುತ್ತದೆ.
©2024 Book Brahma Private Limited.