ಪ್ರೀತಿ ಪ್ರೇಮಗಳ ಮಹತ್ವವನ್ನು ಅದರ ಹಿಂದಿನ ರಹಸ್ಯವನ್ನು ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ. ಪ್ರೀತಿಯನ್ನು ಆ ಥರಾ ಈ ಥರಾ ಎಂದೆಲ್ಲ ವಿವರಸಲು ಸಾದ್ಯವಿಲ್ಲ ಅದನ್ನು ಅನುಭವಿಸಬೇಕು, ಕವಿಗಳು, ಲೇಖಕರು ಎಷ್ಟು ಬಣ್ಣಿಸಿದರೂ, ಎಷ್ಟು ವರ್ಣಿಸಿದರೂ ಪ್ರೀತಿಯೆಂಬ ಸಾಗರದ ಒಂದು ಹನಿಯನ್ನಷ್ಟೇ ಸರ್ಶಿಸಲು ಸಾಧ್ಯವಾದೀತು ಎಂದು ಲೇಖಕರ ಅಭಿಮತ.ಪ್ರೀತಿಸೋರಿಗೆ, ಪ್ರೀತಿಸ್ತಾ ಇರೋರಿಗೆ, ಪ್ರೀತಿಸಲು ಹೊರಡೋರಿಗೆ ಸೂತ್ರಗಳ ರೂಪದಲ್ಲಿ ಅಧ್ಯಾಯಗಳು ತೆರೆದುಕೊಳ್ಳುತ್ತಿರುವುದು ಈ ಕೃತಿಯ ವಿಶೇಷ.“ಪ್ರೀತಿ ನನ್ನಲ್ಲಿ ಮರೀಚಿಕೆ. ಅದು ತೇಜಸ್ವಿ ಅವರ ಹಾರುವ ಹಲ್ಲಿ ಥರಾ ಈಗ ಸಿಕ್ತು ಅನ್ನೋ ಅಷ್ಟರಲ್ಲೇ ಇನ್ನೆಲ್ಲೋ ಮರೆಯಾಗಿದೆ. ಆ ಕುತೂಹಲದ ಫಲವೇ ಪ್ರೇಮಸೂತ್ರ ಪುಸ್ತಕ' ಎನ್ನುವ ಲೇಖಕ, ಪ್ರೀತಿಗೆ ಭೂತಗನ್ನಡಿ ಹಿಡಿಯಲು ಮುಂದಾಗಿದ್ದಾರೆ.
©2024 Book Brahma Private Limited.