’ಮಳೆ ಎಂಬ ಮಾಯಾಂಗನೆ’ ಹಾಡ್ಲಹಳ್ಳಿ ನಾಗರಾಜ್ ಅವರ ಪ್ರಬಂಧ ಕೃತಿಯಾಗಿದೆ. ಇಲ್ಲಿ ಮಲೆನಾಡಿನವನ ಮಳೆ ಪ್ರಪಂಚವನ್ನು ಲೇಖಕ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಮೋಡ ಕವಿದು ಮಳೆ ಸುರಿಯತೊಡಗಿದಾಗ ಓಡಿಹೋಗಿ ಯಾವುದಾದರೂ ದೊಡ್ಡ ಮರದ ಬುಡದಲ್ಲಿ’ನಿಂತು ಇದರೊದೊಳ್ಳೆ ಸೂಳೇರ ಆಟ ಆಯ್ತು’ ಎನ್ನುತ್ತ ಸೀರೆಯ ಸೆರಗುಗೊಡವುತ್ತಾ ನಿಲ್ಲುತ್ತಿದ್ದರು ಎನ್ನುವುದನ್ನು ಲೇಖಕ ಚಿತ್ರಣ ಸಹಿತ, ಸಂಗತಿಗಳು ಕಣ್ಣೆದುರೇ ನಡೆಯುತ್ತಿದೆ ಎನ್ನುವಂತೆ ಕಟ್ಟಿಕೊಡುತ್ತಾರೆ. ಸುರಿಯುತ್ತಿದ್ದ ಜೋರುಮಳೆಯಲ್ಲಿ ಗೊರಗಕವುಚಿಕೊಂಡು ಮೈ ಬೆಚ್ಚಗೆ ಮಾಡಿಕೊಂಡು ಹೆಂಗಸರೆಲ್ಲಾ ಪರಸ್ಪರ ಸರಸ ಸಂಭಾಷಣೆಯಲ್ಲಿ ತೊಡಗಿ ನಡೆಯುತ್ತಿರಬೇಕಾದರೆ ಎದುರಿನಿಂದ ಗಾಳಿಯೊಂದಿಗೆ ನುಗ್ಗಿ ಬಂದ ಮಳೆ ಗೊರಗವನ್ನು ತಿರುಗಿಸಿ ವಿರುದ್ಧ ದಿಕ್ಕಿಗೆ ಹಿಂತಿರುಗಿ ನಿಲ್ಲುವಂತೆ ಮಾಡಿದಾಗ ’ಇದಕ್ಕೆ ಗಾಳಿ ಒಂದು ಮಿಂಡಗಾರ’ ಎಂದು ಶಪಿಸುತ್ತಿದ್ದುದು ನೆನಪಾಗುತ್ತದೆ. ಬಾಲ್ಯದಲ್ಲಿ ಕಂಡ ಮಳೆಯ ಈ ಎಲ್ಲ ಚಂಚಲ ರೂಪಗಳೂ ನೆನಪಿನಲ್ಲಿ ಮೂಡಿ ಬಂದಾಗ ಮಳೆಯನ್ನು ಮಾಯಾಂಗನೆ ಎಂದು ಕರೆಯುವುದೂ ಸರಿಯಾಗಬಹುದೆಂದು ಅನಿಸತೊಡಗಿತು ಎನ್ನುತ್ತಾರೆ ಹಾಡ್ಲಹಳ್ಳಿ ನಾಗರಾಜ್.
ಚಳಿಯನ್ನು ತಡೆಹಿಡಿಯುವ ಎರಡು ಮಾರ್ಗಗಳ್ನನು ಲೇಖಕರು ಇಲ್ಲಿ ದಾಖಲಿಸಿದ್ದಾರೆ. ಆಫೀಸಿನ ಅಧಿಕಾರಿಯ ಕೈ ಕೆಳಗೆ ದುಡಿಯುವ ವ್ಯಕ್ತಿಗೆ ತನ್ನ ಮೇಲಾಧಿಕಾರಿಯನ್ನು ಪುಸಲಾಯಿಸುವ ಕ್ರಿಯೆ ಗೊತ್ತು, ಹಾಗೆಯೇ , ವ್ಯಕ್ತಿಗೆ ಬೇಕಿರುವ ಅಗತ್ಯವು ಅಧಿಕಾರಿಗೆ ಗೊತ್ತು. ಇದು ಎಲ್ಲೆಡೆ ನಡೆಯುವ ಕ್ರಿಯೆಯಾದರೂ, ಆ ಅಧಿಕಾರಿ ತನ್ನ ಕೈ ಕೆಳಗಿನ ವ್ಯಕ್ತಿಯನ್ನು ಸಲಹುವ, ಆತನ ಸಾವಿಗೆ ಮಿಡಿಯುವ ಘಟನೆ ಇಲ್ಲಿ ಅಪರೂಪವೆನ್ನಿಸಿ ಬಿಡುತ್ತದೆ.
ಹಾಡ್ಲಹಳ್ಳಿ ನಾಗರಾಜು ಅವರು ಮೂಲತಃ ಹಾಸನಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹಾಡ್ಲಹಳ್ಳಿ ಗ್ರಾಮದವರು. ತಂದೆ- ಗುರುಶಾಂತೇಗೌಡರು, ತಾಯಿ- ಪುಟ್ಟಮ್ಮ. ಕಡುಬಡತನದ ರೈತಾಪಿ ಕುಟುಂಬದಲ್ಲಿ ಜನಿಸಿದ ಅವರು ಬಿ.ಎಸ್ಸಿ ಪದವೀಧರರಾಗಿದ್ದು, ಎನ್.ಸಿ.ಸಿ ಇಲಾಖೆಯಲ್ಲಿ 36 ವರ್ಷಗಳ ಕಾಲ ಸೇವೆಸಲ್ಲಿಸಿದ್ದಾರೆ. ಅಲ್ಲದೇ ಅವರ ಕಾರ್ಯವೈಖರಿಯಿಂದಾಗಿ ಮುಖ್ಯಮಂತ್ರಿಗಳ ಶ್ಲಾಘನಾಪತ್ರಕ್ಕೆ ಪಾತ್ರರಾಗಿದ್ದಾರೆ. ಎನ್.ಸಿ.ಸಿ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ ನಂತರ ಅದೇ ಇಲಾಖೆಯಲ್ಲಿ ಗೆಜೆಟೆಡ್ ಅಧಿಕಾರಿಯಾಗಿ ಸೇವೆಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಪ್ರಸ್ತುತ ಹಾಸನ ನಗರ ಸಮೀಪ ಅತ್ತಿಹಳ್ಳಿ ಎಂಬ ಗ್ರಾಮದಲ್ಲಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಅಪ್ಪಟ ಮಲೆನಾಡಿನ ಪರಿಸರದಲ್ಲಿ ಹುಟ್ಟಿಬೆಳೆದ ನಾಗರಾಜು ಅವರು ಕನ್ನಡ ಸಾಹಿತ್ಯಲೋಕದಲ್ಲಿ ತಮ್ಮದೇ ಛಾಪುಮೂಡಿಸಿದ್ದಾರೆ. ...
READ MORE