ಸಾಹಿತಿ ದಿಗ್ಗಜ ಡಾ. ಡಿ.ವಿ. ಗುಂಡಪ್ಪನವರ ಕೃತಿ-ಕಾವ್ಯ-ಸ್ವಾರಸ್ಯ. ಸೌಂದರ್ಯ ತ್ರಿಕೂಟ ಎಂಬ ಉಪಶೀರ್ಷಿಕೆ ನೀಡಲಾಗಿದೆ. ಕಾವ್ಯದ ಸ್ವಭಾವ -ರಸಾನುಭವಗಳನ್ನು ಲೇಖಕರು ಚರ್ಚಿಸಿದ್ದಾರೆ. ಸೌಂದರ್ಯ ತ್ರಿಕೂಟ, ಸಹಿತತೆಯಿಂದ ಸಾಹಿತ್ಯ, ಸಾಹಿತ್ಯ ಸಂಹಿತೆ, ರಸ, ರಸ ಭ್ರಾಂತಿ, ಕಾವ್ಯದ ಕೆಲಸ, ಷೇಕ್ಸ್ ಪಿಯರಿಗೆ ನಮಸ್ಕಾರ, ಮಹಾಭಾರತದ ಪಾತ್ರಗಳು, ಕಾವ್ಯವು ಸ್ವಭಾವೋಲ್ಲಾಸ ಹೀಗೆ ವಿವಿಧ ವಿದ್ವತ್ ಪೂರ್ಣ ಪ್ರಬಂಧಗಳನ್ನು ಇಲ್ಲಿ ಸಂಕಲಿಸಲಾಗಿದೆ. ಕಾವ್ಯರಸಾನುಭೂತಿಗೆ ಲೇಖಕರು ‘ಮಹಾಭಾರತದ ಪಾತ್ರಗಳು’ ಎಂಬ ಅಪೂರ್ವವಾದ ಪ್ರಬಂಧವನ್ನು ಸೇರ್ಪಡೆಗೊಳಿಸಿದ್ದಾರೆ. ಲೇಖಕರು ಗೀತೋಪನ್ಯಾಸಗಳನ್ನು ಕೊಟ್ಟಾಗ ಅದಕ್ಕೆ ಭೂಮಿಕೆಯಾಗಬೇಕೆಂದು ಬರೆದುಕೊಂಡಿದ್ದ ಟಿಪ್ಪಣಿಗಳ ಸಂಗ್ರಹವೂ ಆಗಿದೆ.
ಮಂಕುತಿಮ್ಮನ ಕಗ್ಗ ಕಾವ್ಯದಿಂದ ಲೋಕವಿಖ್ಯಾತರಾದ ಡಿವಿಜಿ ಅವರು (ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ) ಲೇಖಕ- ಪತ್ರಕರ್ತ. ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ 1887ರ ಮಾರ್ಚ್ 17ರಂದು ಜನಿಸಿದ ಗುಂಡಪ್ಪ ಅವರು ಪ್ರೌಢಾಶಾಲಾ ಶಿಕ್ಷಣವನ್ನು ಮೈಸೂರು ಮಹಾರಾಜ ಪ್ರೌಢಶಾಲೆಯಲ್ಲಿ ಪಡೆದರು. ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೂ ಸ್ವಂತ ಅಧ್ಯಯನದಿಂದ ಕನ್ನಡ, ಸಂಸ್ಕೃತ, ಇಂಗ್ಲಿಷ್ ಭಾಷೆಗಳಲ್ಲಿ ಪರಿಣತರಾಗಿದ್ದರು. ಮುಳುಬಾಗಿಲಿನ ಒಂದು ಶಾಲೆಯಲ್ಲಿ ಕೆಲವು ಕಾಲ ಬದಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ಅನಂತರ ಕೋಲಾರದ ಸೋಡಾ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡಿ ಬೇಸತ್ತು ಬೆಂಗಳೂರಿನಲ್ಲಿ ಜಟಕಾಬಂಡಿಗೆ ಬಣ್ಣ ಬಳಿಯುವ ಕಾರ್ಖಾನೆಯಲ್ಲಿ ಕೆಲಕಾಲ ಕೆಲಸ ಮಾಡಿದರು. ಅನಂತರ ಪತ್ರಿಕಾರಂಗ ...
READ MORE